Connect with us

Dvgsuddi Kannada | online news portal | Kannada news online

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಸರ್ಕಾರ ಖಾಸಗಿ ಬಸ್ ಗಳ ದರ ನಿಗದಿ ಮಾಡಿ ಸರ್ಕಾರ ಆದೇಶ

ಪ್ರಮುಖ ಸುದ್ದಿ

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಸರ್ಕಾರ ಖಾಸಗಿ ಬಸ್ ಗಳ ದರ ನಿಗದಿ ಮಾಡಿ ಸರ್ಕಾರ ಆದೇಶ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 2ನೇ ದಿನವೂ ಮುಂದುವರೆದಿದ್ದು, ಸರ್ಕಾರ ಖಾಸಗಿ ಬಸ್ ಸಂಚಾರ ಇನ್ನಷ್ಟು ಹೆಚ್ಚಿಸಿದೆ. ಖಾಸಗಿ ವಾಹನಗಳಿಗೆ ಹೆಚ್ಚಿನ ದರ ವಸೂಲಿಗೆ ಇಳಿದಿವೆ ಎನ್ನುವ ಕೂಗು ಸಾರ್ವಜನಿಕರಿಂದ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸಾರಿಗೆ ನೌಕರರು ಆರನೇ ವೇತನ ಆಯೋಗದ ಅನ್ವಯ ವೇತನ ನೀಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶವನ್ನು ನೀಡಿದ್ದು, ಸರ್ಕಾರಿ ಬಸ್ ನಿಲ್ದಾಣದಿಂದ  ಖಾಸಗಿ ಬಸ್ ಗಳು ಪ್ರಯಾಣಿಕರನ್ನು ವಿವಿಧ ಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನ ಜಯನಗರ ಆರ್‌ಟಿಓ ಕಚೇರಿಯಲ್ಲಿ ಸಭೆ ನಡೆಸಿದ ಸಾರಿಗೆ ಇಲಾಖೆ, ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ದರವನ್ನು ನಿಗದಿ ಮಾಡಿದೆ.

  • ಬೆಂಗಳೂರಿನಿಂದ ವಿವಿಧ ನಗರಗಳ ದರ ಪಟ್ಟಿ ಈ ರೀತಿ ಇದೆ:
  • ಬೆಂಗಳೂರು-ಹಾಸನ 209
  •  ಬೆಂಗಳೂರು-ಚಿಕ್ಕಮಗಳೂರು 280
  • ಬೆಂಗಳೂರು-ಶಿವಮೊಗ್ಗ 298
  •  ಬೆಂಗಳೂರು-ದಾವಣಗೆರೆ 312
  •  ಬೆಂಗಳೂರು-ಚಿತ್ರದುರ್ಗ 237
  •  ಬೆಂಗಳೂರು-ಹೊಸದುರ್ಗ 173
  •  ಬೆಂಗಳೂರು-ಪಾವಗಡ 164
  • ಬೆಂಗಳೂರು-ಮಧುಗಿರಿ 111
  • ಬೆಂಗಳೂರು-ಕೊರಟಗೆರೆ 96
  • ಬೆಂಗಳೂರು-ಗೌರಿ‌ಬಿದನೂರ 88
  • ಬೆಂಗಳೂರು-ಚಿಕ್ಕಬಳ್ಳಾಪುರ 69
  • ಬೆಂಗಳೂರು-ಬಾಗೆಪಲ್ಲಿ 117
  •  ಬೆಂಗಳೂರು-ಕೋಲಾರ 76
  •  ಬೆಂಗಳೂರು-ಮುಳಬಾಗಿಲು 105
  • ಬೆಂಗಳೂರು-ತುಮಕೂರು 80
  • ಬೆಂಗಳೂರು-ಬಳ್ಳಾರಿ 360
  •  ಬೆಂಗಳೂರು-ಧರ್ಮಸ್ಥಳ 343
  • ಬೆಂಗಳೂರು-ಉಡುಪಿ 470
  • ಬೆಂಗಳೂರು-ಮಡಿಕೇರಿ 326
  •  ಬೆಂಗಳೂರು-ಬಿಜಾಪುರ 678
  • ಬೆಂಗಳೂರು-ಮಂಗಳೂರು 401
  •  ಬೆಂಗಳೂರು-ಕೊಪ್ಪಳ 462
  • ಬೆಂಗಳೂರು-ಕಲಬುರಗಿ 691
  • ಬೆಂಗಳೂರು-ಹುಬ್ಬಳ್ಳಿ 489

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top