ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಓರ್ವ ಸಾಮಾನ್ಯ ಶಾಸಕ. ಪಕ್ಷದ ವಿಚಾರವಾಗಿ ಮಾತನಾಡಲುಅವರೇನು ಪಕ್ಷದ ಅಧ್ಯಕ್ಷರಲ್ಲ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಯತ್ನಾಳ್, ಸದಾನಂದ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿ.ವಿ.ಎಸ್ ಹೇಳಿದಂತೆ ನಾನೊಬ್ಬ ಸಾಮಾನ್ಯ ಶಾಸಕ. ಇದು ನೂರಕ್ಕೆ ನೂರರಷ್ಟು ನಿಜ. ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೇ ಕೇಂದ್ರ ಸಚಿವನಾಗಿದ್ದೆ. ಸದಾನಂದಗೌಡರು ಈಗ ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ಯಾರು ಸೀನಿಯರ್ ಎಂಬುದನ್ನು ನೀವೇ ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಸಂಕ್ರಮಣದ ವೇಳೆಗೆ ಸಂಪುಟ ವಿಸ್ತರಣೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಏನಾದ್ರೂ ಬದಲಾವಣೆ ಆಗುತ್ತೆ ಎಂದಿದ್ದ ಯತ್ನಾಳ್ ಹೇಳಿಕೆಗೆ ಕಿಡಿಕಾರಿದ್ದಸದಾನಂದ ಗೌಡ, ಬೀದಿಯಲ್ಲಿ ನಿಂತು ಮಾತನಾಡುವುದು ಯತ್ನಾಳ್ ಗೆ ಶೋಭೆಯಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಎಂದು ಹೇಳಿದ್ದರು.



