ಬೆಂಗಳೂರು: ನಿನ್ನೆ ನಡೆದ ಘಟನೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಅದಕ್ಕಾಗಿಯೇ ಇಲ್ಲಿ ಮಾತನಾಡಲು ಕುಳಿತಿದ್ದೇನೆ. ಇದು ಷ್ಯಡ್ಯಂತ್ರವಾದರೂ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಂಸದ ಉಗ್ರಪ್ಪ- ಕಾಂಗ್ರೆಸ್ ಮಾಧ್ಯಮ ಸಂಚಾಲಕ ಸಲೀಂ ಅವರ ವಿರುದ್ಧ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಚಪ್ಪಾಳೆ ತಟ್ಟುವವರು, ಕಲ್ಲು ಹೊಡೆಯುವವರು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಧಿಕ್ಕಾರ ಕೂಗುವವರು, ಜೈಕಾರ ಹಾಕುವವರು ಇರುತ್ತಾರೆ. ನನ್ನ ಕುರಿತು ಮಾತನಾಡಿರುವವರು ಯಾವ ವರ್ಗಕ್ಕೆ ಸೇರಿದವರು ಎಂದು ಜನರೇ ತೀರ್ಮಾನಿಸಲಿದ್ಧಾರೆ ಎಂದರು.
ಮುಖ್ಯಮಂತ್ರಿಯಾಗುವ @DKShivakumar ಅವರ ಕನಸಿಗೆ @INCKarnataka ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ.
ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ಬಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ.
ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ "ಡಿಕೆಶಿ ಪದಚ್ಯುತಿ" ಎಂಬ ಮಾಸ್ಟರ್ ಪ್ಲ್ಯಾನ್ನ ಭಾಗವೇ?#ಭ್ರಷ್ಟಾಧ್ಯಕ್ಷ pic.twitter.com/DE3bKSgYmZ
— BJP Karnataka (@BJP4Karnataka) October 13, 2021
ಮಾಜಿ ಸಂಸದ ಉಗ್ರಪ್ಪ- ಕಾಂಗ್ರೆಸ್ ಮಾಧ್ಯಮ ಸಂಚಾಲಕ ಸಲೀಂ ಅವರ ನಡುವಿನ ಆಂತರಿಕ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಶಿಸ್ತು ಪಾಲನಾ ಸಮತಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ನಡೆದ ಮಾಧ್ಯಮ ಗೋಷ್ಠಿಯ ಸಂದರ್ಭದಲ್ಲಿ ಕೆಲವು ಆಂತರಿಕ ಸಂಭಾಷಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ರೆಹಮಾನ್ ಖಾನ್ ನೇತೃತ್ವದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ.ಅವರ ಹೇಳಿಕೆಗೂ ನನಗೂ ಅಥವಾ ಕಾಂಗ್ರೆಸ್ಗೂ ಸಂಬಂಧ ಇಲ್ಲ, ನಾನು ಯಾವುದೇ ಪರ್ಸೆಂಟೇಜ್ ವಿಷಯದಲ್ಲಿ ಭಾಗಿಯಾಗಿಲ್ಲ, ಭಾಗಿಯಾಗಬೇಕಾದ ಅವಶ್ಯಕತೆಯೂ ನನಗಿಲ್ಲ ಎಂದರು.
ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಿದ್ದರಾಮಯ್ಯ ಅವರು ಮತ್ತು ನನ್ನ ನಡುವೆ ಯಾವುದೇ ಜಗಳ ಇಲ್ಲ. ನಿನ್ನೆ ಹೇಳಿಕೆ ಕೊಟ್ಟವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಂವಿಧಾನ ಆದರಿಸಿ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದರು.ನಾನು ಯಾವ ಪರ್ಸೇಂಟೆಜ್ ವ್ಯವಹಾರದಲ್ಲೂ ಭಾಗಿಯಾಗಿಲ್ಲ. ಗೃಹ ಸಚಿವರು ದೂರು ಕೊಟ್ಟರೆ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಅವರೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಲಿ ಎಂದರು.
ರಾಜ್ಯದ ಜನತೆ ಮತ ಹಾಕಿದ್ದರ ಮೇಲೆ ಪಕ್ಷ ಸಂಘಟನೆಯ ತಕ್ಕಡಿ ನಿರ್ಧಾರವಾಗುತ್ತದೆ. ಬೇರೆ ಯಾರೇ ಮಾತನಾಡಿದರೂ ಅದು ಲೆಕ್ಕಕ್ಕೆ ಬರಲ್ಲ ಎಂದರು. ನಮ್ಮಲ್ಲಿ ಯಾವ ಭ್ರಷ್ಟಚಾರವೂ ಇಲ್ಲ, ಬಿಜೆಪಿ ಬದುಕಿರುವುದೇ ಭ್ರಷ್ಟಾಚಾರದಲ್ಲಿ, ಈ ಸರ್ಕಾರ ರಚನೆಯಾಗಿದ್ದೇ ಭ್ರಷ್ಟಚಾರದ ಮೇಲೆ, ಶಾಸಕರನ್ನು ಖರೀದಿ ಮಾಡಿಯೇ ಸರ್ಕಾರ ಬಂದಿದೆ. ಬಿಜೆಪಿ ವಿರುದ್ಧ ಕಿಡಿಕಾರಿದರು.