ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಜತೆಗಿನ 4 ದಶಕದ ಸಂಪರ್ಕ ಕಡಿತವಾಗಿದ್ದು, ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.
ಇಂದು ಬೆಳಗ್ಗೆ ಕೆಪಿಸಿಸಿಯಲ್ಲಿ ಸೇರ್ಪಡೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಚದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ವೇಣುಗೋಪಾಲ್ ಮುಂತಾದ ಹಿರಿಯ ನಾಯಕರು ಸಮ್ಮುಖದಲ್ಲಿ ಶೆಟ್ಟರ್ ಅವರಿಗರ ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಲಾಯಿತು. ಅಭಯ ಸಿಂಗ್ ಪಾಟೀಲ್ ಸಹ ಸೇರ್ಪಡೆಗೊಂಡರು.
ಜನ ಸಂಘ ಕಾಲದಿಂದ ಬಿಜೆಪಿಯಲ್ಲಿ ಪಕ್ಷ ಸಂಘಟನೆಯಲ್ಲಿ ಗುತಿಸಿಕೊಂಡಿದ್ದ ಶೆಟ್ಟರ್, 4 ದಶಕ ಕಾಲ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಇದ್ದರು. ರಾಜ್ಯದ ಮುಖ್ಯಮಂತ್ರಿ, ಸಚಿವ, ಸಭಾಪತಿ ಸೇರಿ ವಿವಿಧ ಹುದ್ದೆ ಕೆಲಸ ನಿರ್ವಹಿಸಿದ್ದರು. ಇವತ್ತು ಬಿಜೆಪಿಯ ಎಲ್ಲ ಸ್ಥಾನಮಾನಗಳಿಗೆ ಗುಡ್ ಬೈ ಹೇಳಲಿರುವ ಜಗದೀಶ್ ಶೆಟ್ಟರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.



