ಬೆಂಗಳೂರು: ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ. ನಾವೂ ಕೂಡ ಅದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಪರಿಷತ್ ನಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ ಬಗ್ಗೆ ಪ್ರತಿಕ್ರಿಯಿಸಿ ಕೆಲವೊಂದು ತಪ್ಪುಗಳು ಆಗುತ್ತೇವೆ ಅದಕ್ಕೆ ಏನು ಮಾವುದಕ್ಕೆ ಆಗುವುದಿಲ್ಲ. ಇವತ್ತಿನ ರಾಜಕಾರಣ ಕಲುಷಿತವಾಗಿದೆ. ರಾಜಕಾರಣದಲ್ಲಿ ಸಿದ್ಧಾಂತವೇ ಇಲ್ಲ. ನಾವು ನಿನ್ನೆ ಬಂದ್ ಗೆ ಬೆಂಬಲ ನೀಡಿದ್ದೇವೆ. ಪರಿಷತ್ ನಲ್ಲಿ ನಮ್ಮ ಸದಸ್ಯರಿಗೆ ಗೊಂದಲವಾಗಿದೆ. ಕೆಲವರು ಭೂ ಮಸೂದೆಯ ಪರವಾಗಿದ್ದರು. ಮರಿತಿಬ್ಬೇಗೌಡ ಒಬ್ಬರೇ ವಿರೋಧ ವ್ಯಕ್ತಪಡಿಸಿದ್ದು, ಪರಿಷತ್ ನಲ್ಲಿ ಯಾಕೆ ಆಯ್ತು ಅಂತಾ ನಾಳೆ ಹೇಳ್ತೇವೆ ಎಂದರು.
ಸರಿಯೋ ತಪ್ಪೋ ಪರಿಷತ್ ನಲ್ಲಿ ಮಸೂದೆ ಪರ ನಿಂತಿದ್ದು ನಿಜ. ಕಳೆದ ಬಾರಿ ಬಿಲ್ ಮಂಡನೆ ವೇಳೆ ನಾವು ಬಿಜೆಪಿಗೆ ಬೆಂಬಲ ಕೊಟ್ಟಿರಲಿಲ್ಲ. ಬಳಿಕ ನಮ್ಮ ನಾಯಕರ ಜೊತೆ ಬಿಜೆಪಿಯವರು ಮಾತನಾಡಿದ್ದಾರೆ. ನಾವು ವಿರೋಧ ಮಾಡಿದ ಕೆಲವೊಂದು ಅಂಶಗಳನ್ನ ಕಾಯ್ದೆಯಲ್ಲಿ ತೆಗದು ಹಾಕಿದ್ದಾರೆ. ಈಗ ಯಾವ ಪಕ್ಷದಲ್ಲಿ ತತ್ವ ಸಿದ್ದಾಂತ ಇದೆ ನೀವೇ ಹೇಳಿ?. ಇವತ್ತಿನ ರಾಜಕಾರಣದಲ್ಲಿ ಹೊಂದಾಣಿಕೆ ಅಂತೀರೋ ಏನಂತಿರೋ. ರಾಜಕೀಯದಲ್ಲಿ ಸುಧಾರಣೆ ತರಬೇಕಿದೆ ಎಂದರು.



