ಉಡುಪಿ: ಶೀಘ್ರವೇ 252 ಎಫ್ ಎಸ್ ಎಲ್ (FSL) ತಜ್ಞರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಇದರ ಜೊತೆಗೆ ಪ್ರತಿವರ್ಷ 4 ಸಾವಿರ ಪೊಲೀಸರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧ ಕೃತ್ಯಗಳು ನಡೆದ ಸ್ಥಳಕ್ಕೆ ಪೊಲೀಸರು ಮಾತ್ರ ಹೋಗುತ್ತಿದ್ದರು. ಇನ್ಮುಂದೆ, ಎಫ್‌ಎಸ್‌ಎಲ್ ತಜ್ಞರು ತೆರಳಿ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ. ಸೈಬರ್ ಅಪರಾಧಗಳ ತಡೆಗೆ ಸೈಬರ್ ಕ್ರೈಂ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸೈಬರ್ ಠಾಣೆಯ ಅಧಿಕಾರಿಗಳಿಗೆ ಗುಜರಾತ್‌ನಲ್ಲಿ ತರಬೇತಿ ಕೊಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಆನ್‌ಲೈನ್ ಜೂಜು ಹಾಗೂ ಹಣ ಕಟ್ಟಿ ಆಡುವ ಸ್ಕಿಲ್ ಗೇಮ್‌ಗಳನ್ನು ನಿಷೇಧಿಸಲಾಗಿದೆ. ಕಾನೂನುಗಳಿಗೆ ತಿದ್ದುಪಡಿ ತಂದು ಶಿಕ್ಷೆ ಹಾಗೂ ದಂಡದ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.