Connect with us

Dvgsuddi Kannada | online news portal | Kannada news online

ನೂನತ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ 8 ಸಚಿವರೂ ಇಂದೇ ಪ್ರಮಾಣ ವಚನ ಸ್ವೀಕಾರ

ಪ್ರಮುಖ ಸುದ್ದಿ

ನೂನತ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ 8 ಸಚಿವರೂ ಇಂದೇ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ರಾಜ್ಯದಲ್ಲಿಂದು ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದರ ಜೊತೆಗೆ 8 ಶಾಸಕರಿಗಷ್ಟೇ ಮಂತ್ರಿ ಪಟ್ಟ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ

ಸಿಎಂ, ಡಿಸಿಎಂ ಜೊತೆಗೆ 8 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ 8 ನೂತನ ಸಚಿವರ ಆಯ್ಕೆ ಬಹಳಷ್ಟು ವಿಶೇಷವಾಗಿದೆ. ಕಾಂಗ್ರೆಸ್ ವರಿಷ್ಟರು ಅಳೆದು ತೂಗಿ, ಸಮುದಾಯವಾರು ಪ್ರಾತಿನಿದ್ಯ ನೀಡಿ ಆಯ್ಕೆ ಮಾಡಿದ್ದಾರೆ. ಪ್ರಮುಖವಾಗಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎರಡೂ ಬಣಗಳ ಬಡಿದಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಅವಕಾಶ ನೀಡಿಲ್ಲ. ಮೊದಲ ಹಂತದ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ.

  • ನೂತನ ಸಚಿವರು
  • ಎಂ.ಬಿ ಪಾಟೀಲ್, ಲಿಂಗಾಯತ
  • ಡಾ.ಜಿ ಪರಮೇಶ್ವರ್, ದಲಿತ ಬಲ
  • ಪ್ರಿಯಾಂಕ್ ಖರ್ಗೆ, ದಲಿತ ಬಲ
  • ಕೆ.ಹೆಚ್ ಮುನಿಯಪ್ಪ, ದಲಿತ ಎಡ
  • ಕೆ.ಜೆ ಜಾರ್ಜ್, ಕ್ರಿಶ್ಚಿಯನ್
  • ಸತೀಶ್ ಜಾರಕಿಹೊಳಿ, ST (ವಾಲ್ಮೀಕಿ)
  • ಜಮೀರ್ ಅಹ್ಮದ್ ಖಾನ್, ಮುಸ್ಲಿಂ
  • ರಾಮಲಿಂಗಾ ರೆಡ್ಡಿ, ರೆಡ್ಡಿ ಒಕ್ಕಲಿಗ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top