Connect with us

Dvgsuddi Kannada | online news portal | Kannada news online

ಬಳ್ಳಾರಿ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆ ರದ್ದು

ಪ್ರಮುಖ ಸುದ್ದಿ

ಬಳ್ಳಾರಿ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆ ರದ್ದು

ಬಳ್ಳಾರಿ : ಕೊರೊನಾ ಹಿನ್ನಲೆ ಈ ಸಲದ ಐತಿಹಾಸಿಕ ಶ್ರೀ ಮೈಲಾರ ಜಾತ್ರೆ ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಫೆ 19 ರಿಂದ ಮಾ 2 ರವರೆಗೂ ನಡೆಯಬೇಕಿದ್ದ ಜಾತ್ರೋತ್ಸವ ರದ್ದಾಗಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರ ಗ್ರಾಮದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆ ರಾಜ್ಯದಲ್ಲಿ ಬಹಳ ಪ್ರಸಿದ್ದಿ ಪಡೆದಿದೆ. ಈ ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ಹಲವು ಜಿಲ್ಲೆಯಿಂದ ಭಕ್ತರು ಬರುತ್ತಾರೆ. ವಿಶೇಷ ಮೈಲಾರದ ಕಾರ್ಣಿಕ ರಾಜ್ಯದಲ್ಲಿ ಮಹತ್ವ ಪಡೆದುಕೊಂಡಿದೆ.

ಈ ಕಾರ್ಣಿಕ ರಾಜ್ಯದ ಮಳೆ, ಬೆಳೆ ಮುನ್ಸೂಚನೆ ಆಗಲಿದೆ ಎಂಬುದು ರೈತರ ಮತ್ತು ಭಕ್ತರ ನಂಬಿಕೆ. ಹೀಗಾಗಿ ಕಾರ್ಣಿಕವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಭವಿಷ್ಯ ಆಲಿಸುತ್ತಾರೆ. ಮಾರ್ಚ್ 1 ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು.ಕೊರೊನಾ ಸೋಂಕಿನ ಹಿನ್ನೆಲೆ ಫೆ.19 ರಿಂದ ಮಾ 2 ರವರೆಗೂ ನಡೆಯಬೇಕಿದ್ದ ಜಾತ್ರೋತ್ಸವನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top