Connect with us

Dvgsuddi Kannada | online news portal | Kannada news online

ವಿಧಾನ ಪರಿಷತ್ ಉಪ ಸಭಾಪತಿ ಆತ್ಮಹತ್ಯೆ; ಜೆಡಿಎಸ್ ಶಾಸಕ ಸ್ಫೋಟಕ ಹೇಳಿಕೆ

ಪ್ರಮುಖ ಸುದ್ದಿ

ವಿಧಾನ ಪರಿಷತ್ ಉಪ ಸಭಾಪತಿ ಆತ್ಮಹತ್ಯೆ; ಜೆಡಿಎಸ್ ಶಾಸಕ ಸ್ಫೋಟಕ ಹೇಳಿಕೆ

ಬೆಂಗಳೂರು: ವಿಧಾನಪರಿಷತ್​ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್​ ಎಂಎಲ್​​ಸಿ ಬಿ. ಎಂ. ಫಾರೂಖ್​ ಬೇಸರ ವ್ಯಕ್ತಪಡಿಸಿದ್ದು, ವಿಧಾನಪರಿಷತ್​ ಗಲಾಟೆ ವೇಳೆ ಅವರನ್ನ ಬಲವಂತವಾಗಿ ಖುರ್ಚಿಯಿಂದ ಕೆಳಗಿಳಿಸಲಾಗಿತ್ತು. ಈ ಘಟನೆ ಬಳಿಕ ಅವರು ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಈ ಘಟನೆ ಬಳಿಕ ನಾನು ಧರ್ಮೇಗೌಡರನ್ನ ಭೇಟಿ ಮಾಡಿದ್ದೆ. ಅವರು ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಅವರು ಉಪಸಭಾಪತಿ ಸ್ಥಾನವನ್ನ ಬಯಸಿಯೇ ಇರಲಿಲ್ಲ. ಅವರ ಮುಖಭಾವ ನೋಡುತ್ತಿದ್ದರೆ,  ಆ ಗಲಾಟೆ ನಡೆಯುವ ದಿನ ಯಾರದ್ದೋ ಮಾತಿಗೆ ಕಟ್ಟುಬಿದ್ದು ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರು ಎಂದೆನಿಸಿತ್ತು ಎಂದರು.

ಇಂದು ಬೆಳಗ್ಗೆ ಚಿಕ್ಕಮಗಳೂರು ರೈಲ್ವೆ ಹಳಿಯ ಬಳಿ ಧರ್ಮೇಗೌಡರ ಮೃತದೇಹ ಪತ್ತೆಯಾಗಿತ್ತು. ಮನನೊಂದಿದ್ದ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top