ಬೆಂಗಳೂರು: ರಾಜ್ಯದ 6 ಸಾವಿರ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ದಾವಣಗೆರೆ: ಮದುವೆಯಾಗಿ ಎರಡೇ ತಿಂಗಳಿಗೆ ಓಡಿಹೋದ ಪತ್ನಿ; ಮನನೊಂದು ಪತಿ, ಯುವತಿಯ ಸೋದರ ಮಾವ ಆತ್ಮ*ಹತ್ಯೆ
ಫ್ರೀಡಂ ಪಾರ್ಕ್ ನಲ್ಲಿ ಮನರೇಗಾ ರದ್ದು ವಿರೋಧಿಸಿ ರಾಜಭವನ ಚಲೋ ಪ್ರತಿಭಟನೆಯಲ್ಲಿ ಮಾತನಾಡಿ, ಈ ಘೋಷಣೆ ಮಾಡಿದರು. ಪ್ರತಿ ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಲಾಗಿದೆ. ಮುಂಬರುವ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ. 6000 ಗ್ರಾಮ ಪಂಚಾಯತಿಗಳಿಗೂ ಗಾಂಧಿಜೀ ಇಡುತ್ತೇವೆ ಎಂದು ತಿಳಿಸಿದರು.
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಕೊಟ್ಟ ಮಾತು ಉಲ್ಲೇಖ; ಈ ಬಾರಿ ಅಲ್ಪಸಂಖ್ಯಾತರಿಗೇ ಟಿಕೆಟ್ ಎಂದ ಸಚಿವ ಜಮೀರ್
ರಾಮ್ ಹೆಸರು ಬರುವ ರೀತಿ ಕಾಯ್ದೆ
ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಕಾಯ್ದೆ ಜಾರಿಗೊಂಡಿತ್ತು. ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರ ಬಗ್ಗೆ ಕಾಂಗ್ರೆಸ್ ಮಾತ್ರ ಚಿಂತನೆ ಮಾಡುತ್ತದೆ. ಬಿಜೆಪಿ ಎಲ್ಲಾ ಕಾರ್ಯಕ್ರಮ ನಾಶ ಮಾಡಿ ಉದ್ಯೋಗ ಸಿಗದಂತೆ ಮಾಡಿದ್ದಾರೆ.ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ದುರುದ್ದೇಶದಿಂದ ರಾಮ್ ಹೆಸರು ಬರುವ ರೀತಿ ಮಾಡಿದ್ದಾರೆ. ಅಲ್ಲಿ ಸೀತಾ ರಾಮ, ಕೌಶಲ್ಯ ರಾಮ, ದಶತರ ರಾಮ ಇಲ್ಲ. ಮನಹೋಹನ್ ಸಿಂಗ್ ಇದ್ದಾಗ ಈ ಕಾಯ್ದೆ ಮಾಡಲಾಗಿದೆ ಎಂದರು.
ಆರ್ ಎಸ್ ಎಸ್ ಮಾರ್ಗದರ್ಶನದಂತೆ ಕಾಯ್ದೆ
ಮನರೇಗಾ ದಲ್ಲಿ ಉದ್ಯೋಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೀರ್ಮಾನ ಆಗುತ್ತಿತ್ತು. ಆದರೆ ಜಿ ರಾಮ್ ಜಿ ಯಲ್ಲಿ ದೆಹಲಿಯಲ್ಲಿ ಎಲ್ಲ ತೀರ್ಮಾನ ಆಗುತ್ತದೆ. ನೀವು ಉದ್ದೇಶಿಸಿದ ಕಡೆ ಕೆಲಸ ಸಿಗಲ್ಲ.ಬಡವರಿಗೆ ಹಣಕಾಸು ಸಿಗಬಾರದು, ಅವರು ಸೇವಕರಾಗಿ ಇರಬೇಕು ಎಂಬ ಉದ್ದೇಶದಿಂದ ಆರ್ ರದ್ದು ಮಾಡಲಾಗಿದೆ. ಎಸ್ ಎಸ್ ಮಾರ್ಗದರ್ಶನ ಮಾಡಿ ಕಾಯ್ದೆ ಮಾಡಿದ್ದಾರೆ ಎಂದರು.
ಒಂದು ಪಂಚಾಯತಿಗೆ ಒಂದು ಕೋಟಿ ಸಿಗ್ತಾ ಇತ್ತು. ಆದರೆ ಇನ್ಮುಂದೆ ಸಿಗುವುದಿಲ್ಲ. ಕಾಯ್ದೆ ಜಾರಿಗೆ 40% ರಾಜ್ಯ ಸರ್ಕಾರ ಹಾಗೂ ಕೇಂದ್ರ 60% ಅನುದಾನ ನೀಡಬೇಕಾಗಿದೆ. ಕೇಂದ್ರದ ನೀತಿಯಿಂದಾಗಿ ಅನೇಕ ರಾಜ್ಯಗಳು ಕಷ್ಟದಲ್ಲಿವೆ. ಹೀಗಾಗಿ ಇಡೀ ದೇಶದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ವಿಬಿ ಜಿ ರಾವ್ ಜಿ ರದ್ದು ಮಾಡಿ ಮನರೇಗಾ ಪುನಸ್ಥಾಪನೆ ಮಾಡುವವರೆಗೆ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದರ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತವಾಗಬಾರದು ಎಂಬುವುದು ಉದ್ದೇಶವಾಗಿದೆ. ಸಮಾಜದಲ್ಲಿ ಅಸಮಾನತೆ ಇರಬೇಕು ಎಂಬುದು ಆರ್ ಎಸ್ ಎಸ್ ಹುನ್ನಾರವಾಗಿದೆ ಎಂದು ವಾಗ್ದಾಳಿ ನಡೆಸಿದರು. ಮಹಾತ್ಮಾ ಗಾಂಧಿಯನ್ನು ನರೇಂದ್ರ ಮೋದಿ ಮತ್ತೊಮ್ಮೆ ಹತ್ಯೆ ಮಾಡಿದೆ. ಇನ್ನು ನಾವು ಬಿಡಬೇಕಾ? ಬಿಜೆಪಿ ಪ್ರತಿದಿನ ಸುಳ್ಳು ಹೇಳುತ್ತಿದೆ. ಮನರೇಗಾ ರದ್ದುಕುರ ಗಿ ನಾವು ವಿಶೇಷ ಅಧಿವೇಶನ ಕರೆದಿದ್ದೇವೆ. ನಾವು ಚರ್ಚೆ ಹಾಗೂ ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಮನವಿ
ಬೃಹತ್ ಪ್ರತಿಭಟನಾ ಸಭೆ ಬಳಿಕ ಪಾದಯಾತ್ರೆಯ ಮೂಲಕ ಲೋಕಭವನಕ್ಕೆ ತೆರಳಿ, ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರದ ನಿಲುವಿಗೆ ನಮ್ಮ ಪ್ರತಿರೋಧವನ್ನು ದಾಖಲಿಸಿದೆವು.
ಇದು ನಮ್ಮ ಹೋರಾಟದ ಆರಂಭವಷ್ಟೆ, ಮುಂದಿನ ದಿನಗಳಲ್ಲಿ ಬಡಜನರ ವಿರೋಧಿ ‘ವಿಬಿ ಗ್ರಾಮ್ ಜಿ’ ಕಾಯ್ದೆಯನ್ನು ಕಿತ್ತೊಗೆದು, ಮನರೇಗಾ ಮರು ಜಾರಿ ಮಾಡುವಂತೆ ದೇಶಾದ್ಯಂತ ಜನಾಂದೋಲನವನ್ನು ಕಾಂಗ್ರೆಸ್ ಪಕ್ಷ ಮುಂದೆ ನಿಂತು ಸಂಘಟಿಸಲಿದೆ ಎಂದರು.



