ದಾವಣಗೆರೆ: ಕರ್ನಾಟಕದ ಯಾವುದೇ ಭಾಗ ಮಹಾರಾಷ್ಟ್ರಕ್ಕೆ ಹೋಗಲ್ಲ ಎಂಬ ವಿಶ್ವಾಸ ನಮಗಿದೆ. ಈ ಬಗ್ಗೆ ಮುಂದಿನ ವಾರ ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಾಸಕ ಎಸ್‌ಎ ರವೀಂದ್ರನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಹಿಸುವ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟೇಟ್ ರಿ-ಆರ್ಗನೈಸೇಷನ್ ವಿಚಾರದಲ್ಲಿ ಆರ್ಟಿಕಲ್ಸ್ 3 ಅಡಿಯಲ್ಲಿ ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದೆ. ಈ ಕೇಸ್ ನ್ಯಾಯ ಸಮ್ಮತವಲ್ಲ ಎನ್ನುವುದನ್ನು ನಾವು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಈ ಬಗ್ಗೆ ಹಿರಿಯ ವಕೀಲ ಉದಯ್ ಹೊಳ್ಳ ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇವೆ ಎಂದರು.
ಕರ್ನಾಟಕದ ಯಾವುದೇ ಭಾಗ ಮಹಾರಾಷ್ಟ್ರಕ್ಕೆ ಹೋಗಲ್ಲ ಎಂಬ ಸಂಪೂರ್ಣ ವಿಶ್ವಾಸವಿದೆ. ಕರ್ನಾಟಕದ ಯಾವುದೇ ಭಾಗ ಬದಲಾಗಲ್ಲ. ಅವರ ಬೇಡಿಕೆ ಬೇರೆಯದ್ದೇ ಇದೆ. ಈ ಬಗ್ಗೆ ಮುಂದಿನ ವಾರ ಸರ್ವ ಪಕ್ಷಗಳ ಹಾಗೂ ಕಾನೂನು ತಜ್ಞರ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಎನ್ಸಿಪಿ ಮುಖ್ಯಸ್ಥಶರದ್ ಪವಾರ್ ಬಹಳ ವರ್ಷಗಳಿಂದ ಕರ್ನಾಟಕ ಮಹರಾಷ್ಟ್ರ ಗಡಿ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಅಂತ ಕನಸು ಕಾಣುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಿಸುವ ಅವರ ಕನಸು ನನಸಾಗಲ್ಲ ಎಂದರು.