ಬೆಂಗಳೂರು: ಕರ್ನಾಟಕ ಲೋಕಾಯುಕ್ತದಲ್ಲಿ ಖಾಲಿ ಇರುವ 30 ಕ್ಲರ್ಕ್, ಟೈಪಿಸ್ಟ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 29 ನವೆಂಬರ್ ಕೊನೆ ದಿನ. 30 ಹುದ್ದೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ 14 ಹುದ್ದೆಗಳು ಹಾಗೂ ಉಳಿದ 16 ಹುದ್ದೆಗಳಿವೆ. ಅರ್ಜಿಯನ್ನು lokayukta.karnataka.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿಬೇಕಿದೆ. ತಿಂಗಳಿಗೆ 34,100-67,600 ರೂ. ಸಂಬಳ ನಿಗದಿಪಡಿಸಲಾಗಿದೆ.
- ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕ
- ಪ್ರಾರಂಭ ದಿನಾಂಕ: 30 ಅಕ್ಟೋಬರ್ 2024
- ಕೊನೆಯ ದಿನಾಂಕ: 29 ನವೆಂಬರ್ 2024
- ಶುಲ್ಕ ಪಾವತಿಸಲು ಕೊನೆಯ ದಿನಾಂಕ 30 ನವೆಂಬರ್ 2024
ಅರ್ಹತೆ: ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು . ಅಭ್ಯರ್ಥಿಯು 29-ನವೆಂಬರ್-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 38 ವರ್ಷ
ಸಡಿಲಿಕೆ ವಿವರ ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ನೋಟಿಫಿಕೇಶನ್ ಪ್ರಕಾರ 03 ವರ್ಷಗಳು, ಎಸ್‌ಸಿ ,ಎಸ್‌ಟಿ, ವರ್ಗ I ಅಭ್ಯರ್ಥಿಗಳಿಗೆ 05 ವರ್ಷಗಳು ವಯೋಮಿತಿ ಸಡಿಲಿಕೆ ಇದೆ. ಇದರೊಂದಿಗೆ ಎಸ್‌ಸಿ ,ಎಸ್‌ಟಿ, ವರ್ಗ I ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಹಾಗಿಲ್ಲ. ಆದರೆ
ಸಾಮಾನ್ಯ/2A/2B/3A/3B ಅಭ್ಯರ್ಥಿಗಳು 250 ರೂ.ಗಳನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕಿದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಅಕ್ಟೋಬರ್ 2024, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ನವೆಂಬರ್ 2024, ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 30 ನವೆಂಬರ್ 2024 ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆಗೆ lokayukta.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಿ. ಸಹಾಯವಾಣಿ ಸಂಖ್ಯೆ: 080-22011297 ಅನ್ನು ಹೆಚ್ಚಿನ ವಿವರಗಳಿಗಾಗಿ, ದೂರವಾಣಿ ಸಂಖ್ಯೆ: 080-22011210/080-22011279.



