ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಒಂದು ದಿನದ ಮುಷ್ಕರದಿಂದ ಸರ್ಕಾರಕ್ಕೆ ಕೋಟಿಗಟ್ಟಲೇ ನಷ್ಟ ಅನುಭವಿಸಬೇಕಾಗುತ್ತದೆ. ನಿನ್ನೆಯ ಮುಷ್ಕರದಿಂದ ಸಾರಿಗೆ ಇಲಾಖೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 17 ಕೋಟಿ ರು. ಆದಾಯ ನಷ್ಟ ಆಗಿದೆ.
ಈಗಾಗಲೇ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನಿಗಮಗಳಿಗೆ ಈ ಮುಷ್ಕರ ಮತ್ತೊಂದು ಹೊಡೆತ ನೀಡಿದೆ. 4 ನಿಗಮಗಳ ಒಟ್ಟು 22 ಸಾವಿರ ಬಸ್‌ಗಳ ಪೈಕಿ ಕೇವಲ 430 ಬಸ್‌ಗಳು ಮಾತ್ರ ಪೊಲೀಸ್ ಭದ್ರತೆಯಲ್ಲಿ ಕೆಲ ಕಾಲ ಕಾರ್ಯಾಚರಣೆ ನಡೆಸಿವೆ. ಹೀಗಾಗಿ ಕೆಎಸ್‌ಆರ್‌ಟಿಸಿಗೆ ದಿನದ ಆದಾಯ ಸುಮಾರು 7.50 ಕೋಟಿ ರು., ಬಿಎಂಟಿಸಿಗೆ ಸುಮಾರು 3 ಕೋಟಿ ರು., ಈಶಾನ್ಯ ಸಾರಿಗೆ ನಿಗಮ ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ ತಲಾ ಸುಮಾರು 3.50 ಕೋಟಿ ರು. ಆದಾಯ ನಷ್ಟವಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳ ಮಾಹಿತಿ.
ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದಾರೆ. ಇಂದು ಕೂಡ ಬಸ್ ಗಳು ರಸ್ತೆಗೆ ಇಳಿಯಲ್ಲ. ಹೀಗಾಗಿ ಸಾರಿಗೆ ಇಲಾಖೆ ಇನ್ನುಷ್ಟು ಅರ್ಥಿಕ ಸಂಕಷ್ಟ ಎದುರಿಸಲಿದೆ.