ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭಗೊಂಡಿದೆ. ಆದರೆ, ಈಗಾಗಲೇ ಪಡೆದ ಬಸ್ ಪಾಸ್ ಅವಧಿ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಗಳಲ್ಲಿ ಫೆ.28 ವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳು 2019-20 ನೇ ಸಾಲಿನ ಬಸ್ ಪಾಸ್ ಹಾಗೂ ಪ್ರಸಕ್ತ ವರ್ಷದಲ್ಲಿ ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ ರಶೀದಿ ಯೊಂದಿಗೆ ಸಂಬಂಧಪಟ್ಟ ಮಾರ್ಗದಲ್ಲಿ ಕರಾರಸಾ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಫೆ. 28ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀನಿಗಮದ ಬಸ್ಸುಗಳಲ್ಲಿ ವಿದ್ಯಾರ್ಥಿ ಬಸ್ ಪಾಸುದಾರರಿಗೆ 2019-20ನೇ ಸಾಲಿನ ಪಾಸಿನ ಆಧಾರದಲ್ಲಿ ಉಚಿತವಾಗಿ ಪ್ರಯಾಣಿಸಲು ಕೆ ಎಸ್ ಆರ್ ಟಿ ಸಿ ನಿಗಮವು ಫೆ.28ರವರೆಗೆ ಅವಕಾಶ ಕಲ್ಪಿಸಿದೆ.
ಪ್ರಸಕ್ತ ವರ್ಷದಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಹೊಸ ಬಸ್ ಪಾಸ್ ಪಡೆಯಬೇಕಿರುವುದರಿಂದ ಈ ಬಗ್ಗೆ ತಮ್ಮ ವಿಭಾಗ ವ್ಯಾಪ್ತಿಯ ಶಾಲಾ/ಕಾಲೇಜು ಮಕ್ಕಳಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವಂತೆ ಕೆ ಎಸ್ ಆರ್ ಟಿ ಸಿ ಪ್ರಕಟಣೆ ಹೊರಡಿಸಿದೆ.



