ದಾವಣಗೆರೆ: ಪ್ರಸಕ್ತ ಸಾಲಿನ ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್‍ಪಾಸ್ ಹೊಸದಾಗಿ ನವೀಕರಣ ಮೂಲಕ ಪಡೆಯಲು ಆನ್‍ಲೈನ್‍ನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂದು ಪೋರ್ಟ್‍ಲ್ https://serviceonline.gov.in/karnataka/ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್(ಐಡಿ)ಗೆ ಮತ್ತು ಹೊಸ ಪಾಸ್‍ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು, ದಾವಣಗೆರೆ ವಿಭಾಗ ಕೌಂಟರ್(ಐಡಿ)ಗೆ ಅರ್ಜಿ ಸಲ್ಲಿಸಬಹುದು. ಡಿ.31 ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು ದಿನಾಂಕ:-28-02-2024ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಪಾಸ್ ನವೀಕರಣ ಮಾಡಿಸಿಕೊಳ್ಳಲು ಪಾಸ್ ವಿತರಣಾ ಕೇಂದ್ರ ಮತ್ತು ತಾಲ್ಲೂಕು ವಿವರ: 1.1.2024 ರಿಂದ 29.2.2024 ರವರೆಗೆ ದಾವಣಗೆರೆ, ಜಗಳೂರು, ಚನ್ನಗಿರಿ, ಫಲಾನುಭವಿಗಳಿಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್‍ನಿಲ್ದಾಣ, ಮತ್ತು ಹರಿಹರ ಫಲಾನುಭವಿಗಳಿಗೆ ಹರಿಹರದ ಬಸ್ ನಿಲ್ದಾಣವನ್ನು ಸಂಪರ್ಕಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.



