ಗುರುಮಠಕಲ್: ಕಲಬುರಗಿ ಜಿಲ್ಲೆಯ ಸೇಡಂ ಬಸ್ ಘಟಕದ ಸೇಡಂ-ಹೈದರಾಬಾದ್ ಮಾರ್ಗವಾಗಿ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಲ್ಟಿಯಾಗಿದ್ದು, 20 ಜನರಿಗೆ ಗಂಭೀರ ಗಾಯವಾಗಿದೆ.
ಇಂದು ಬೆಳಿಗ್ಗೆ ಸೇಡಂ ನಗರದಿಂದ ಗುರುಮಠಕಲ್ ತಾಲ್ಲೂಕಿನ ಚಂಡರಿಕಿ ಮಾರ್ಗವಾಗಿ ಹೈದರಾಬಾದ್ ನಗರಕ್ಕೆ ತೆರಳುವಾಗ ತೆಲಂಗಾಣ ರಾಜ್ಯದ ನಾರಾಯಣಪೇಟ ನಗರದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಕಲ್ಯಾಣ ಕರ್ನಾಟ ಸಾರಿಗೆ ನಿಗಮಕ್ಕೆ ಸೇರಿದ ಕೆ.ಎ.32 ಎಫ್ 2419 ಬಸ್ ಪಲ್ಟಿಯಾಗಿದ್ದು, 20 ಜನರಿಗೆ ಗಾಯವಾಗಿದೆ. ಗಾಯಗಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.