Connect with us

Dvgsuddi Kannada | online news portal | Kannada news online

ಕೆಎಂಎಫ್ ನಲ್ಲಿ ಖಾಲಿ ಇರುವ  ವಿವಿಧ 219 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಕೆಎಂಎಫ್ ನಲ್ಲಿ ಖಾಲಿ ಇರುವ  ವಿವಿಧ 219 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ  ಅರ್ಜಿ  ಆಹ್ವಾನಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 219 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 17 ರೊಳಗೆ ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು.  ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್​ಸೈಟ್​ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

  • ಹುದ್ದೆಗಳ ವಿವರ
  • ಸಹಾಯಕ ವ್ಯವಸ್ಥಾಪಕ – 28 ಹುದ್ದೆಗಳು
  • ವೈದ್ಯಕೀಯ ಅಧಿಕಾರಿ- 1 ಹುದ್ದೆ
  • ಆಡಳಿತ ಅಧಿಕಾರಿ- 1 ಹುದ್ದೆ
  • ಖರೀದಿ/ಸ್ಟೋರ್​ಕೀಪರ್- 3 ಹುದ್ದೆಗಳು
  • MIS/ಸಿಸ್ಟಮ್ ಅಧಿಕಾರಿ- 1 ಹುದ್ದೆ
  • ಲೆಕ್ಕಪತ್ರ ಅಧಿಕಾರಿ- 2 ಹುದ್ದೆಗಳು
  • ಮಾರ್ಕೆಟಿಂಗ್ ಅಧಿಕಾರಿ- 3 ಹುದ್ದೆಗಳು
  • ತಾಂತ್ರಿಕ ಅಧಿಕಾರಿ- 14 ಹುದ್ದೆಗಳು
  • ತಂತ್ರಜ್ಞ- 1 ಹುದ್ದೆ
  • ವಿಸ್ತರಣಾಧಿಕಾರಿ- 22 ಹುದ್ದೆ
  • MIS ಸಹಾಯಕ ಗ್ರೇಡ್I- 2 ಹುದ್ದೆಗಳು
  • ಆಡಳಿತ ಸಹಾಯಕ ಗ್ರೇಡ್ 2- 13 ಹುದ್ದೆಗಳು
  • ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್2- 12 ಹುದ್ದೆಗಳು
  • ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 18 ಹುದ್ದೆಗಳು
  • ಖರೀದಿ ಸಹಾಯಕ ಗ್ರೇಡ್2 – 6 ಹುದ್ದೆಗಳು
  • ರಸಾಯನಶಾಸ್ತ್ರಜ್ಞ ಗ್ರೇಡ್2- 4 ಹುದ್ದೆಗಳು
  • ಜೂನಿಯರ್ ಸಿಸ್ಟಮ್ ಆಪರೇಟರ್- 10 ಹುದ್ದೆಗಳು
  • ಕೋ-ಆರ್ಡಿನೇಟರ್ (ರಕ್ಷಣೆ)- 2 ಹುದ್ದೆಗಳು
  • ದೂರವಾಣಿ ನಿರ್ವಾಹಕ- 2 ಹುದ್ದೆಗಳು
  • ಜೂನಿಯರ್ ತಂತ್ರಜ್ಞ- 64 ಹುದ್ದೆಗಳು
  • ಚಾಲಕರು- 8 ಹುದ್ದೆಗಳು
  • ಲ್ಯಾಬ್ ಸಹಾಯಕ- 2 ಹುದ್ದೆಗಳು

ವಯೋಮಿತಿ:KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವೇತನ:ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವೇತನ ನಿಗದಿ ಮಾಡಲಾಗುತ್ತದೆ. ಅಂದರಂತೆ ಕನಿಷ್ಠ 21 ಸಾವಿರದಿಂದ ಗರಿಷ್ಠ 97 ಸಾವಿರದವರೆಗೆ ವೇತನ ಸಿಗಲಿದೆ.

ಅರ್ಜಿ ಶುಲ್ಕ: SC/ST/Cat-I ಅಭ್ಯರ್ಥಿಗಳಿಗೆ: ರೂ.500/- ಇತರ ಎಲ್ಲಾ ಅಭ್ಯರ್ಥಿಗಳಿಗೆ: ರೂ.1000/- ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶೈಕ್ಷಣಿಕ ಅರ್ಹತೆ ಸೇರಿ ಇತರೆ ಹೆಚ್ಚಿನ ಮಾಹಿತಿಗೆ ಈ ಬಗ್ಗೆ ಹೆಚ್ಚಿ ಮಾಹಿತಿಗೆ ವೆಬ್ ಸೈಟ್ tumul.coop ಪರಿಶೀಲಿಸಿ.   ಅಧಿಸೂಚನೆ ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು   ಏಪ್ರಿಲ್ 17, 2023 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ  ಅಧಿಕೃತ ವೆಬ್‌ಸೈಟ್: tumul.coop ಭೇಟಿ ನೀಡಿ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top