ಬೆಂಗಳೂರು: ರಾಜ್ಯ ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರಿಗೆ ದಿನದ ಕರ್ತವ್ಯ ಭತ್ಯೆಯನ್ನು 600 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 3025 ಗೃಹ ರಕ್ಷಕರ ದಿನ ಭತ್ಯೆಯನ್ನು 600 ಹೆಚ್ಚಳ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 455 ಇದ್ದಂತ ದಿನ ಭತ್ಯೆಯನ್ನು 600ಗೆ ಹೆಚ್ಚಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿ ಇದ್ದಂತ ರೂ.380ರ ದಿನ ಭತ್ಯೆಯನ್ನು ಸಹ ರೂ.600ಕ್ಕೆ ಹೆಚ್ಚಳ ಮಾಡಲಾಗಿದೆ.



