Connect with us

Dvgsuddi Kannada | online news portal | Kannada news online

HSR ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ ಬಗ್ಗೆ ಸಾರಿಗೆ ಸಚಿವರ ಮಹತ್ವದ ಹೇಳಿಕೆ

ಪ್ರಮುಖ ಸುದ್ದಿ

HSR ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ ಬಗ್ಗೆ ಸಾರಿಗೆ ಸಚಿವರ ಮಹತ್ವದ ಹೇಳಿಕೆ

ಬೆಂಗಳೂರು: 2019 ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ವಾಹನಗಳುಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ (High Security registration number plate-HSRP) ಅಳವಡಿಕೆ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನೆಯ ದಿನವಾಗಿದೆ. ಆದರೂ, ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ. ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಮಾಡಿಸಲು ಫೆ.17 ಲಾಸ್ಟ ಡೇಟ್ ಇದೆ. ಹಿಂದೆ ಒಂದು ಸರಿ ಮುಂದಕ್ಕೆ ಹಾಕಿದ್ದೆವು. ಈಗ ಮತ್ತೆ ಮುಂದಕ್ಕೆ ಹಾಕಿ ಅಂತಾ ಹೇಳ್ತ ಇದ್ದಾರೆ. ಇನ್ನು ಒಂದು ವಾರ ಸಮಯ ಇದೆ. ಎಲ್ಲಾ ಕೊನೆಯನಲ್ಲಿ ಅರ್ಜಿ ಹಾಕೋಕೆ ಬರ್ತಾರೆ. ಒತ್ತಡ ಜಾಸ್ತಿ ಆಗಿ ಅಪ್ಲೋಡ್ ಆಗೋಲ್ಲ ಅದೊಂದು ಸಮಸ್ಯೆ ಇದೆ. ಇನ್ನು ಒಂದು ವಾರ ಸಮಯವಿದೆ ನೋಡೋಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ‌ ಮಾಹಿತಿ ನೀಡಿದರು.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನೆಯ ದಿನ. ಬಳಿಕ ದುಬಾರಿ ದಂಡ ಪಾವತಿ ತಲೆನೋವು ಶುರುವಾಗಲಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ. ಈ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಆನ್ ಲೈನ್ ನಲ್ಲಿ ಬುಕ್ ಮಾಡಿಕೊಂಡು ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆಗಿರುವ ವಾಹನಗಳಿಗೆ ಹಾಕಲಾಗಿರುವ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ರ ಮೊದಲ ರಿಜಿಸ್ಟ್ರೇಶನ್ ಆಗಿದೆಯೋ ಆ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. HSRP ನಂಬರ್ ಪ್ಲೇಟ್ ಬುಕಿಂಗ್‌ನಲ್ಲಿ ನಗದು ವ್ಯವಹಾರವಿಲ್ಲ. ಆನ್‌ಲೈನ್ ಮೂಲಕವೇ ಬುಕಿಂಗ್, ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು.

ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.

  • ಆನ್ ಲೈನ್ ಅರ್ಜಿ ಭರ್ತಿ ಮಾಡುವ ವಿಧಾನ
  • Book HSRP ಕ್ಲಿಕ್ ಮಾಡಿ
  • ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
  • ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿ
  • ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿ
  • HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
  • ಮೊಬೈಲ್ ನಂಬರ್‌ಗೆ ಬರವ ಒಟಿಪಿ ನಮೂದಿಸಿ
  • HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top