ಬೆಂಗಳೂರು : ನಮಗೆ ಯುಗಾದಿಯೇ ಹೊಸ ವರ್ಷ. ಹೊಸ ವರ್ಷದ ಆಚರಣೆ ನಮ್ಮ ಸಂಸ್ಕೃತಿಯಲ್ಲ. ಹೀಗಾಗಿ ಡಿಸೆಂಬರ್ 31ರಿಂದ ಜನವರಿ 1ರವರೆಗೆ ಜನಜಂಗುಳಿಯನ್ನು ನಿಷೇಧಿಸಲಾಗುತ್ತದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಸರ್ಕಾರದ ಈ ನಿರ್ಧಾರದಿಂದ ರಾಜ್ಯದಲ್ಲಿ ಹೊಸ ವರ್ಷ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕುತ್ತಾ ಎಂಬ ಸಂದೇಹಕ್ಕೂ ಕಾರಣವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಆಚರಣೆ ನಮ್ಮದಲ್ಲ. ನಮ್ಮ ಸಂಸ್ಕೃತಿಯೂ ಅಲ್ಲ. ನಮಗೆ ಹೊಸವರ್ಷ ಅಂದ್ರೇ ಅದು ಯುಗಾದಿ. ಹೀಗಾಗಿ ಡಿಸೆಂಬರ್ 31ರಿಂದ ಜನವರಿ 1ರವರೆಗೆ ಜನಜಂಗುಳಿಯನ್ನು ನಿಷೇಧಿಸಲಾಗಿದೆ. ಪಬ್, ರೆಸ್ಟೋರೆಂಟ್ ಬಗ್ಗೆ ನಾಳೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.



