Connect with us

Dvgsuddi Kannada | online news portal | Kannada news online

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಗೆ ಕೊಲೆ ಬೆದರಿಕೆ ಪತ್ರ

ದಾವಣಗೆರೆ

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಗೆ ಕೊಲೆ ಬೆದರಿಕೆ ಪತ್ರ

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  (ದೂಡಾ) ರಾಜನಹಳ್ಳಿ ಶಿವಕುಮಾರ್ ಗೆ  ಕೊಲೆ ಬೆದರಿಕೆ ಪತ್ರವೊಂದು  ಬಂದಿದೆ. ಈ ಪತ್ರದಲ್ಲಿ ಎಸ್ ಎಸ್ ಮಾಲ್ ವಿಚಾರಕ್ಕೆ ಬಂದ್ರೆ ಗತಿ ಸರಿ ಇರಲ್ಲ ಎಂದು  ಬೆದರಿಕೆ ಹಾಕಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ರಾಜನಹಳ್ಳಿ ಶಿವಕುಮಾರ್, ನಗರದ ಎಸ್ ಎಸ್ ಮಾಲ್ ಕಟ್ಟುವಾಗ ಮಹಾನಗರ ಪಾಲಿಕೆ ಜಾಗ ಒತ್ತುವರಿಯಾಗಿದ್ದು, ಶೀಘ್ರವೇ ತೆರವುಗೊಳಿಸುವುದಾಗಿ ಹೇಳಿಕೆ ನೀಡಿದ್ದರು. ಈ ವಿಚಾರವನ್ನೇ ಪ್ರಸ್ತಾಪಿಸಿ ಪತ್ರ ಬರೆದಿರುವ ಗಂಗಾಧರ್ ಹನುಂತಪ್ಪ ಎಂಬುವರು ಕೊಲೆ ಬೆದರಿಕೆ ಹಾಕಿದ್ದಾರೆ.  ಈ ಎಸ್ ಎಸ್ ಮಾಲ್ ಶಾಸಕ ಶಾಮನೂರು ಶಿವಶಂಕರಪ್ಪ ಪುತ್ರ ಎಸ್ ಎಸ್ ಗಣೇಶ್ ಅವರಿಗೆ ಸೇರಿದ ಮಾಲ್ ಆಗಿದೆ. ಈ ಕೊಲೆ ಬೆದರಿಕೆ ಪತ್ರ ಬಂದ ಹಿನ್ನೆಲೆ ಬಸವನಗರ ಪೊಲೀಸ್ ಠಾಣೆಯಲ್ಲಿ ರಾಜನಹಳ್ಳಿ ಶಿವಕುಮಾರ್ ದೂರು ನೀಡಲು ನಿರ್ಧರಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});