Connect with us

Dvgsuddi Kannada | online news portal | Kannada news online

ಹಸಿರು ಪಟಾಕಿ ಎಂದರೇನು? ಹೇಗೆ ಇರುತ್ತೆ ಈ ಪಟಾಕಿ..?

ಪ್ರಮುಖ ಸುದ್ದಿ

ಹಸಿರು ಪಟಾಕಿ ಎಂದರೇನು? ಹೇಗೆ ಇರುತ್ತೆ ಈ ಪಟಾಕಿ..?

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈ  ಬಾರಿ ರಾಜ್ಯಾದ್ಯಂತ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ  ವೇಳೆ ಹಸಿರು ಪಟಾಕಿ ಹಚ್ಚಲು  ಸರ್ಕಾರ ಅನುಮತಿ ನೀಡಿದೆ. ಆದರೆ, ಈ ಹಸಿರು ಪಟಾಕಿ ಹೇಗೆ ಇರುತ್ತೇ..? ಎಂಬುದು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹೇಗಿರುತ್ತೆ ಈ  ಹಸಿರು ಪಟಾಕಿ:  ಸಿಎಂ ಹಸಿರು ಪಟಾಕಿ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ  ಅನೇಕರು ಈ ಹಸಿರು ಪಟಾಕಿ  ಹುಡುಕಾಟ ನಡೆಸುತ್ತಿದ್ದಾರೆ.  ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಈ ಹಸಿರು ಪಟಾಕಿ ಬಗ್ಗೆ ಬಹುತೇಕರಿಗೆ ಅರಿವಿಲ್ಲ. ಅಲ್ಲದೇ ಈ ಹಸಿರು ಪಟಾಕಿ ಮಾರಾಟದ ಬಗ್ಗೆ ಈ ಹಿಂದೆಯೇ ವರ್ತಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು.

ಪಟಾಕಿಯಂತೆಯೇ ಕಾಣುವ ಇದು ಪರಿಸರ ಸ್ನೇಹಿ. ಹೆಚ್ಚು ಮಾಲಿನ್ಯವಿಲ್ಲದ ಈ ಪಟಾಕಿ ಕೇವಲ ಶೇ 30ರಷ್ಟು ಪ್ರಮಾಣದ ಹೊಗೆ ಹೊರ ಹಾಕುತ್ತದೆ. ಕೌನ್ಸಿಲ್​ ಆಫ್ ಸೈಂಟಿಫಿಕ್​ ಅಂಡ್​ ಇಂಡಸ್ಟ್ರಿಯಲ್​ ರಿಸರ್ಚ್​  ಪ್ರಯೋಗಾಲಯದ ಮೂಲಕ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಕಳೆದ ವರ್ಷ ಈ ಪಟಾಕಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ​ದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು.

ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ತಯಾರಿಸಲಾಗುವ ಈ ಹಸಿರು ಪಟಾಕಿ. ಸಾಮಾನ್ಯ ಪಟಾಕಿಗಳನ್ನು ನೈಟ್ರೇಟ್​ ಮತ್ತು ಬೇರಿಯಂಗಳು ಕಂಡು ಬರುತ್ತವೆ. . ಈ ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಮತ್ತು ಹೊಗೆ ಹೊರ ಹಾಕುವುದನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಸುರಕ್ಷಿತ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});