ಬೆಂಗಳೂರು: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ವರ್ಷದ ಸಾರ್ವತ್ರಿಕ ವರ್ಗಾವಣೆ (universal transfer ) ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.
- ಮೇ 15ರಿಂದ ಜೂನ್ 14ರ ವರೆಗೆ ವರ್ಗಾವಣೆ ಅವಕಾಶ
- ಕಾರ್ಯನಿರತ ವೃಂದಬಲದ ಶೇ. 6ರಷ್ಟು ಮೀರದಂತೆ ವರ್ಗಾವಣೆ
- 2 ವರ್ಷದೊಳಗೆ ನಿವೃತ್ತಿ ಆಗುವ ನೌಕರರನ್ನು ವರ್ಗಾಯಿಸಬೇಕಿಲ್ಲ
- ಎ ಮತ್ತು ಬಿ ದರ್ಜೆ ಅಧಿಕಾರಿ 2 ವರ್ಷ ಪೂರೈಸಿಲ್ಲದಿದ್ರೆ ವರ್ಗಾವಣೆಗೆ ಅವಕಾಶವಿಲ್ಲ
ಮೇ 15ರಿಂದ ಜೂನ್ 14ರ ವರೆಗೆ ಎಲ್ಲಾ ಸರಕಾರಿ ನೌಕರರು ವರ್ಗಾವಣೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯನಿರತ ವೃಂದಬಲದ ಶೇ. 6ರಷ್ಟು ಮೀರದಂತೆ ವರ್ಗಾವಣೆ ಮಾಡಿಕೊಳ್ಳಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
2 ವರ್ಷದೊಳಗೆ ನಿವೃತ್ತಿ ಆಗುವ ನೌಕರರನ್ನೂ ವರ್ಗಾಯಿಸಬೇಕೆಂದಿಲ್ಲ. ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಮುಖ್ಯ ಹಂತದಲ್ಲಿದ್ದರೆ ವರ್ಗಾವಣೆ ಬೇಡ. ಅಂಗವಿಕಲ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಬೇಕು ಎಂದೂ ಉಲ್ಲೇಖೀಸಿದೆ.ಅದೇ ರೀತಿ ಹಿಂದೆ ವರ್ಗಾವಣೆ ಯಾಗಿರುವ ಸ್ಥಳದಲ್ಲಿ ಎ ಮತ್ತು ಬಿ ದರ್ಜೆ ಅಧಿಕಾರಿ 2 ವರ್ಷ ಪೂರೈಸಿಲ್ಲದಿದ್ರೆ ಬೇರೆ ಸ್ಥಳಕ್ಕೆ ವರ್ಗಾಯಿಸುವ ಅಗತ್ಯವಿಲ್ಲ. ಹಾಗೆಯೇ 4 ವರ್ಷ ಪೂರೈಸದ ಸಿ ದರ್ಜೆ ನೌಕರ ಮತ್ತು 7 ವರ್ಷ ಪೂರ್ಣಗೊಳಿಸದ ಡಿ ದರ್ಜೆ ನೌಕರರ ವರ್ಗಾವಣೆಗೂ ಅವಕಾಶವಿಲ್ಲ.
ವರ್ಗಾವಣೆ ವೇಳೆ ಪ್ರತಿಯೊಬ್ಬ ನೌಕ ರರಿಗೂ ಸ್ಥಳ ನಿಯುಕ್ತಿ ನೀಡಬೇಕು.ಅದಕ್ಕಾಗಿ ಕಾಯುವಂತಾಗಬಾರದು. ಇದರಿಂದ ಸರಕಾರಕ್ಕೆ ಅನಾವಶ್ಯಕ ಆರ್ಥಿಕ ಹೊರೆ ಆಗಲಿದೆ.ಒಂದು ವೇಳೆ ಗಂಭೀರ ಸ್ವರೂಪದ ಆರೋಪಗಳಿದ್ದು, ಇಲಾಖಾ ವಿಚಾರಣೆ ಅಥವಾ ಯಾವುದೇ ತನಿಖೆ ನಡೆಯುತ್ತಿದ್ದರೆ ಅಂತಹವರನ್ನು ಆರೋಪಕ್ಕೆ ಸಂಬಂಧಿಸಿದ ತನಿಖೆ ಅಥವಾ ಇಲಾಖಾ ವಿಚಾ ರಣೆಯಲ್ಲಿ ಹಸ್ತಕ್ಷೇಪ ಮಾಡುವ ಹುದ್ದೆಗ ಳಿಗೆ ನೇಮಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.