ದಾವಣಗೆರೆ: ಸರ್ಕಾರಿ ಶಾಲೆಯಲ್ಲಿ (government chool) ಒಂದೇ ಮಗು ಇದ್ದರೂ ಶಾಲೆಯನ್ನು ಮುಚ್ಚದಿರಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
13 ಸಾವಿರ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು
ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ 13 ಸಾವಿರ ಶಾಲೆಗಳಲ್ಲಿ ಮಕ್ಕಳ ಹಾಜರಾತಿ 25ಕ್ಕಿಂತಲೂ ಕಡಿಮೆ ಇದ್ದು, ಯಾವುದೇ ಶಾಲೆ ಮುಚ್ಚದಿರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಹೊಸ ಪಿಯು ಕಾಲೇಜ್ ಆರಂಭ
ಈಗ 800 ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲು 3500 ಕೋಟಿ ಅನುದಾನವನ್ನು ಇಡಲಾಗಿದೆ. ಅಷ್ಟೇ ಅಲ್ಲದೇ ಹೊಸ ಪಿಯು ಕಾಲೇಜ್‌ಗಳನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.



