ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮೇಲ್ಮನೆ ಸಚಿವಾಲಯದಲ್ಲಿ ವಾಹನ ಚಾಲಕರು ಮತ್ತು ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 3 ಚಾಲಕ, 29 ಗ್ರೂಪ್ ಡಿ ಸೇರಿ ಒಟ್ಟು 32 ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 5, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಚಾಲಕ ಹುದ್ದೆಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು, ವಾಹನ ಚಾಲನೆ ಪರವಾನಗಿ ಹೊಂದಿರಬೇಕು, ಮೂರು ವರ್ಷ ವಾಹನ ತರಬೇತಿ ಹೊಂಂದಿರಬೇಕು. ಇದರ ಜೊತೆಗೆ ಪ್ರಥಮ ಚಿಕಿತ್ಸೆ ಪ್ರಮಾಣ ಪತ್ರ ಅಗತ್ಯ. ಇನ್ನೂ ಡಿ ಗ್ರೂಪ್ ಹುದ್ದೆಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಅರ್ಜಿ ಶುಲ್ಕ; ಸಾಮಾನ್ಯ ಅಭ್ಯರ್ಥಿಗೆ 600 ರೂ., ಪ್ರವರ್ಗ 2(A),2(B),3(A),3(B) 300 ರೂ. ಮಾಜಿ ಸೈನಿಕರಿಗೆ 50 ರೂ., ಎಸ್ಸಿ, ಎಸ್ಟಿ ಯಾವುದೇ ಶುಲ್ಕವಿಲ್ಲ. ವೇತನ: ಚಾಲಕರಿಗೆ ಮಾಸಿಕ 21,400 ರೂ. ಹಾಗೂ ಡಿ ಗ್ರೂಪ್ 17,000 ರೂ. ಹೆಚ್ಚಿನ ಮಾಹಿತಿಗೆ ಅಧಿಸೂಚನೆಯ ಈ ಲಿಂಕ್ https://kla.kar.nic.in/council/notification04032024.PDF ಮೂಲಕ ವೀಕ್ಷಿಸಿ.
ಅರ್ಜಿ ಸಲ್ಲಿಸಬೇಕಾದ ವಿಳಾಸ ಅರ್ಜಿಗಳನ್ನು ಸಚಿವಾಲಯದ ವೆಬ್ಸೈಟ್ ನಲ್ಲಿ https://kla.kar.nic.in/council/notification04032Details ನೀಡಿದ್ದು, ನಮೂನೆ-1 ರ ದ್ವಿಪ್ರತಿಯಲ್ಲಿ ಅಗತ್ಯವುಳ್ಳ ದಾಖಲೆಗಳನ್ನು ಲಗತ್ತಿಸಿ, ಕೊನೆಯ ದಿನಾಂಕ 05-04-2024 ರಂದು ಸಂಜೆ 05-00 ಗಂಟೆಯೊಳಗಾಗಿ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ – 5079, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು – 560 001 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆಯ ಮೂಲಕ ವಿಧಾನ ಸೌಧದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 216 ಪತ್ರ ಸ್ವೀಕಾರ ಮತ್ತು ರವಾನೆ ಶಾಖೆಗೆ ತಲುಪಿಸಬೇಕು.



