Connect with us

Dvgsuddi Kannada | online news portal | Kannada news online

ಈ ಬಾರಿಯೂ ಹರಿಹರ ಶಾಸಕ ರಾಮಪ್ಪ ಟಿಕೆಟ್ ನೀಡುವಂತೆ ಬೆಂಬಲಿಗರ ಘೋಷಣೆ; ಸಿಟ್ಟಿಗೆದ್ದ ಸಿದ್ದರಾಮಯ್ಯ ಕಾರ್ಯಕರ್ತನಿಗೆ ಕಪಾಳಮೋಕ್ಷ

ಪ್ರಮುಖ ಸುದ್ದಿ

ಈ ಬಾರಿಯೂ ಹರಿಹರ ಶಾಸಕ ರಾಮಪ್ಪ ಟಿಕೆಟ್ ನೀಡುವಂತೆ ಬೆಂಬಲಿಗರ ಘೋಷಣೆ; ಸಿಟ್ಟಿಗೆದ್ದ ಸಿದ್ದರಾಮಯ್ಯ ಕಾರ್ಯಕರ್ತನಿಗೆ ಕಪಾಳಮೋಕ್ಷ

ಬೆಂಗಳೂರು; ತಾವೇ ಯಾವ ಕ್ಷೇತ್ರದಲ್ಲಿ ಸ್ಫರ್ಧಿಸಬೇಕು ಎಂಬ ಗೊಂದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹರಿಹರ ಕ್ಷೇತ್ರದ ಶಾಸಕ ರಾಮಪ್ಪಗೆ ಈ ಬಾರಿಯೂ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಜೋರು ಘೋಷಣೆ ಕೂಗುತ್ತಿದ್ದರು. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಕಾರ್ಯಕರ್ತರೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಸಂಗ ನಡೆದಿದೆ.

ಹರಿಹರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ರಾಮಪ್ಪ ಹಾಗೂ ರಾಣೆಬೆನ್ನೂರಿನ ಟಿಕೆಟ್​ ಆಕಾಂಕ್ಷಿ ಆರ್.ಶಂಕರ್ ಬೆಂಬಲಿಗರು ಇಂದು (ಮಾ.24) ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನಿವಾಸದ ಬಳಿ ಘೋಷಣೆ ಕೂಗುತ್ತಿದ್ದರು. ಆಗ ನಿವಾಸದಿಂದ ಹೊರ ಬಂದ‌ ಸಿದ್ದರಾಮಯ್ಯಗೆ ಜೋರು ಘೋಷಣೆ, ನೂಕುನುಗ್ಗಲು, ತಳ್ಳಾಟ ಕಿರಿಕ್ ಉಂಟು ಮಾಡಿತ್ತು.

ಸಿದ್ದರಾಮಯ್ಯ ಬೆಂಬಲಿಗರ ನಡುವೆಯಿಂದ ಕೆಪಿಸಿಸಿ ಕಚೇರಿಗೆ ಹೋಗಲು ಮುಂದಾಗಿದ್ದರು. ಈ ವೇಳೆ ಕಾರ್ಯಕರ್ತನೊಬ್ಬ ನಮ್ಮ ನಾಯಕನಿಗೆ (ರಾಮಪ್ಪಗೆ) ಟಿಕೆಟ್​ ನೀಡಿ ಎಂದು ಒತ್ತಾಯಿಸಿದ್ದಾನೆ. ಜನರ ಮಧ್ಯೆ ನೂಕಾಟದಲ್ಲಿ ಕೋಪದಲ್ಲಿದ್ದ ಸಿದ್ದರಾಮಯ್ಯ, ಕಾರ್ಯಕರ್ತನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನೂಕು-ನುಗ್ಗಲು ನಡುವೆ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಕಾರಿನಲ್ಲಿ ತೆರಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top