ದಾವಣಗೆರೆ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 6ನೇ ತರಗತಿ (ಸಿ.ಬಿ.ಎಸ್.ಸಿ ಪಠ್ಯಕ್ರಮ), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿ (ರಾಜ್ಯ ಪಠ್ಯಕ್ರಮ)ದಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಫೆಬ್ರವರಿ 10 ಕೊನೆ ದಿನ
ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತರ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಪ್ರವೇಶಕ್ಕಾಗಿ ಲಭ್ಯವಿರುತ್ತದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ( morarji desai residential school online application 2026) ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶ ಪ್ರಕ್ರಿಯೆಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ನಡೆಸುತ್ತಿದ್ದು, ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 10 ರೊಳಗಾಗಿ ಸೇವಾ ಸಿಂಧು ಪೋರ್ಟಲ್ Website: https://sevasindhu services.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ದಾವಣಗೆರೆ: 56 ಸಾವಿರಕ್ಕೆ ಕುಸಿದ ಅಡಿಕೆ ದರ; ಏಕಾಏಕಿ ಕುಸಿಯಲು ಕಾರಣ ಏನು..?
ಜಿಲ್ಲೆಯ ವಸತಿ ಶಾಲೆಗಳ ವಿಳಾಸ, ಫೋನ್ ನಂಬರ್
ಡಾ|| ಎ.ಪಿ.ಜೆಅಬ್ದುಲ್ ಕಲಾಂ ವಸತಿ ಶಾಲೆ, ಕೊಂಡಜ್ಜಿ, ಮೊ.ಸಂ: 9164583470
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಕೆರೆಬಿಳಚಿ, ಮೊ.ಸಂ: 9008815296
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ಬಾಲಕಿಯರ ವಸತಿ ಶಾಲೆ, ವಡೇರಹಳ್ಳಿಮೊ.ಸಂ: 9916828601
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆಕೊಡಚಗೊಂಡನಹಳ್ಳಿ ಮೊ.ಸಂ: 9164855466
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆಜಗಳೂರು ಮೊ.ಸಂ: 9591114413
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಬಸವಪಟ್ಟಣ, ಮೊ.ಸಂ: 9844011545
ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿ ಶಾಲೆ, ಹೊಸಕುಂದುವಾಡ, ಮೊ.ಸಂ: 7022234663
ತಾಲ್ಲೂಕು ವಿಸ್ತಾರಣಾಧಿಕಾರಿಗಳು, ಅಲ್ಪಸಂಖ್ಯಾತರಕಲ್ಯಾಣ ಇಲಾಖೆ, ದಾವಣಗೆರೆ ಉಪ ವಿಭಾಗ ಮೊ.ಸಂ: 08192-250066
ಜಿಲ್ಲಾ ಮಾಹಿತಿ ಕೇಂದ್ರ ದಾವಣಗೆರೆ ಮೊ.ಸಂ: 7019837748
ತಾಲ್ಲೂಕು ಮಾಹಿತಿಕೇಂದ್ರ ಹರಿಹರ ಮೊ.ಸಂ: 9845329483
ತಾಲ್ಲೂಕು ಮಾಹಿತಿಕೇಂದ್ರ ಚನ್ನಗಿರಿ ಮೊ.ಸಂ: 8660520572
ತಾಲ್ಲೂಕು ಮಾಹಿತಿಕೇಂದ್ರ ಹೊನ್ನಾಳಿ ಮೊ.ಸಂ: 9739888820
ತಾಲ್ಲೂಕು ಮಾಹಿತಿಕೇಂದ್ರ ಜಗಳೂರು ಮೊ.ಸಂ: 9880392344 ಸಂರ್ಪಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.



