ದಾವಣಗೆರೆ: ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ (PU college) ಕಾಲೇಜುಗಳಲ್ಲಿ ನಾಳೆ (ಅ. 23) ಗ್ರಾಮೀಣ ಐಟಿ ರಸಪ್ರಶ್ನೆ (quiz) ಮೊದಲ ಸುತ್ತಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12 ರಿಂದ 1ಗಂಟೆಯ ವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಕಾಲೇಜು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಈ ಪರೀಕ್ಷೆಗೆ 15 ಅಂಕ ನಿಗದಿಪಡಿಸಿದ್ದು, ಪ್ರತಿ ಕಾಲೇಜಿನಿಂದ ಅತೀ ಹೆಚ್ಚು ಅಂಕ ಗಳಿಸಿದ 2 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 29 ರಂದು ದಾವಣಗೆರೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 11ಗಂಟೆಗೆ ನಡೆಸಲಾಗುವ ಎರಡನೇ ಸುತ್ತಿನ ರಸ ಪ್ರಶ್ನೆ ಕಾರ್ಯಕ್ರಮ ಕಳುಹಿಸಿಕೊಡಬೇಕು.
ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕು ನೋಡಲ್ ಅಧಿಕಾರಿಗಳು ಅ.23 ರ ಬೆಳಗ್ಗೆ 10 ಗಂಟೆಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪಡೆದು ಮಧ್ಯಾಹ್ನ 1ಗಂಟೆಗೆ ಉತ್ತರ ಪತ್ರಿಕೆಯನ್ನು ಸಹ ನೀಡಲಾಗುತ್ತದೆ. ತಾಲ್ಲೂಕು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಕಾಲೇಜುಗಳಿಂದ ಫಲಿತಾಂಶ ಪಡೆದು ಕ್ರೋಢೀಕೃತ ಮಾಹಿತಿಯನ್ನು ಅಕ್ಟೋಬರ್ 24ರ ಒಳಗಾಗಿ ಕಳುಹಿಸಲು ಸೂಚಿಸಿದೆ.
ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ವಿವರ:
ದಾವಣಗೆರೆ ತಾಲ್ಲೂಕಿಗೆ ಎಂ.ಎ.ಫರ್ಜಾನ, ಹರಿಹರ ಎಸ್.ರಾಜಶೇಖರಯ್ಯ, ಜಗಳೂರು ತಾಲ್ಲೂಕಿಗೆ ಸಿ.ಪಿ . ಜಗದೀಶ್, ಹೊನ್ನಾಳಿಗೆ ಬಸವರಾಜ ಬೋವಿ, ನ್ಯಾಮತಿಗೆ ವಿ. ಪಿ. ಪೂರ್ಣಾನಂದ ಹಾಗೂ ಚನ್ನಗಿರಿಗೆ ಡಿ. ಎಸ್ ದೇವರಾಜ ಅವರನ್ನು ತಾಲ್ಲೂಕು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.