ದಾವಣಗೆರೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾವಣಗೆರೆ ನಗರದ ವಿವಿಧ ಮನೆ, ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ, ರಾಗಿಯನ್ನು ವಶಪಡಿಸಿಕೊಂಡಿದ್ದಾರೆ.
ಎಲ್ಲೆಲ್ಲಿ ಎಷ್ಟು ವಶ..?
ದಾವಣಗೆರೆ ನಗರದಲ್ಲಿ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ, ರಾಗಿ ಯನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ದಾವಣಗೆರೆ ಪಡಿತರ ನಿರೀಕ್ಷಕರು ಗಳೊಂದಿಗೆ ಈ ಕೆಳಕಂಡ ಸ್ಥಳಗಳ ಮೇಲೆ ದಾಳಿ ಮಾಡಿದ್ದು ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
- ಆರ್ ಎಂ ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎಪಿಎಂಸಿ ಎತ್ತಿನ ಸಂತೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 12 ಕ್ವಿಂಟಲ್ ಪಡಿತರ ಅಕ್ಕಿ
- ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 9 ಕ್ವಿಂಟಲ್ ಅಕ್ಕಿ, 1.68 ಕ್ವಿಂಟಲ್ ರಾಗಿ, ,
- ಗಾಂಧಿನಗರ ಠಾಣೆ ವ್ಯಾಪ್ತಿಯಲ್ಲಿ ಎಸ್ ಪಿ ಎಸ್ ನಗರದ ಹತ್ತಿರ ಶೇಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 8 ಕ್ವಿಂಟಲ್ ಅಕ್ಕಿ,
- ಆಜಾದ್ ನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 6 ಕ್ವಿಂಟಲ್ ಗೂ ಹೆಚ್ಚು ಅಕ್ಕಿ ಹಾಗೂ
ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ ನರಸರಾಜ ಪೇಟೆ ಯಲ್ಲಿ ಅಂಗಡಿಯೊಂದರ ಖಾಲಿ ಸೈಟಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 22 ಕ್ವಿಂಟಲ್ ಪಡಿತರ ಅಕ್ಕಿ ಒಟ್ಟು ಸುಮಾರು 57 ಕ್ವಿಂಟಲ್ ಅಕ್ಕಿ, ಸುಮಾರು 2 ಕ್ವಿಂಟಲ್ ರಾಗಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.. ಈ ಸಂಬಂಧ ಬಸವನಗರ, ಆಜಾದ್ ನಗರ, ಗಾಂಧಿನಗರ, ಕೆಟಿಜೆ ನಗರ, ಆರ್ ಎಂ ಸಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗುತ್ತವೆ.
ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳಾದ ಪಿಎಸ್ಐ ಸಾಗರ ಅತ್ತರ ವಾಲಾ, ಸಿಬ್ಬಂದಿಗಳಾದ ಮಂಜುನಾಥ, ಪ್ರಕಾಶ, ಗೋವಿಂದರಾಜ್ ಹಾಗೂ ಆಹಾರ ನಿರೀಕ್ಷಕರುಗಳನ್ನು ಹಾಗೂ ಸ್ಥಳೀಯ ಠಾಣೆಗಳ ಅಧಿಕಾರಿ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪ್ರಶಂಸಿಸಿರುತ್ತಾರೆ



