Connect with us

Dvgsuddi Kannada | online news portal | Kannada news online

ದಾವಣಗೆರೆ: ಜೆ. ಹೆಚ್. ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರಿಡಲು ದೂಡ ಸಭೆಯಲ್ಲಿ ತೀರ್ಮಾನ

ಪ್ರಮುಖ ಸುದ್ದಿ

ದಾವಣಗೆರೆ: ಜೆ. ಹೆಚ್. ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರಿಡಲು ದೂಡ ಸಭೆಯಲ್ಲಿ ತೀರ್ಮಾನ

ದಾವಣಗೆರೆ: ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ 6 ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ನಾಮಕರಣ ಮಾಡಲಾಗುವುದೆಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು. Breaking news: ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ; ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು, ಲಾರಿ

ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಎರಡು ವೃತ್ತಗಳಿಗೆ ಜಗನ್ನಾಥ್ ಜೋಷಿ ಮತ್ತು ಡಾ: ಶಾಮ್ ಪ್ರಸಾದ್ ಮುಖರ್ಜಿ ಇವರುಗಳ ಹೆಸರನ್ನು ನಾಮಕರಣ ಮಾಡಲಾಗುವುದು. ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ವಿಲೇಗೆ ಲಭ್ಯವಿದ್ದ ಒಟ್ಟು 08 ನಾಗರೀಕ ಸೌಲಭ್ಯದ ನಿವೇಶನಗಳ ಹಂಚಿಕೆಗಾಗಿ ಫೆ.20 ರಂದು ರಂದು ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಉಪಸಮಿತಿ ಸಭೆಯನ್ನು ನಡೆಸಲಾಯಿತು. 08 ನಾಗರೀಕ ಸೌಲಭ್ಯದ ನಿವೇಶನಗಳ ಪೈಕಿ 05 ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಒಟ್ಟು 09 ಅರ್ಜಿಗಳು ಸ್ವೀಕೃತವಾಗಿದ್ದು, ಸದರಿ ಅರ್ಜಿಗಳ ಪೈಕಿ 05 ಸಂಸ್ಥೆ/ಕಛೇರಿಗಳಿಗೆ ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾನ್ಯ ಶಾಸಕರು ಹಾಗೂ ಸದಸ್ಯರುಗಳ ಗಮನಕ್ಕೆ ತಂದರು.

ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾತಾನಾಡಿ ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಿಂದ ಅಭಿವೃದ್ದಿ ಪಡಿಸಿರುವ. ದಾವಣಗೆರೆ ತಾಲ್ಲೂಕು ಕುಂದುವಾಡ ಗ್ರಾಮದ ವಿವಿಧ ರಿಸನಂ:ಗಳಲ್ಲಿ ಒಟ್ಟು 53 ಎಕರೆ ಜಮೀನುಗಳನ್ನು ವಸತಿ ಯೋಜನೆ ಉದ್ದೇಶಕ್ಕೆ ನೇರ ಖರೀದಿ ಮೂಲಕ ಜಮೀನು ಖರೀದಿ ಮಾಡಲು ಹಾಗೂ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987ರ ಕಲಂ-15(ಬಿ)ರಂತೆ ಪೂರ್ವಾನುಮತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಆಯುಕ್ತರು ಶಾಸಕರ ಗಮನಕ್ಕೆ ತಂದರು.

ಪ್ರಾಧಿಕಾರದ ಸದಸ್ಯರಾದ ನಾಗರಾಜ ಎಂ. ರೋಖಡೆ ಇವರು ಮಾತಾನಾಡಿ ಹರಿಹರ ನಗರದಲ್ಲಿ ರಿಂಗ್ ರಸ್ತೆ ಇಲ್ಲದೇ ಇರುವುದರಿಂದ ರಿಂಗ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು. ಈ ಬಗ್ಗೆ ಸಭೆಯು ರಿಂಗ್ ರಸ್ತೆ ಕಾಮಗಾರಿ ಕೈಗೊಳ್ಳಲು ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ತೀರ್ಮಾನಿಸಿತು.

ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ಬರುವುದನ್ನು ತಡೆಯುವ ಸಂಬಂಧವಾಗಿ ದಾವಣಗೆರೆ ಮಹಾನಗರಪಾಲಿಕೆ ಆಯುಕ್ತರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಾಲ್ಲೂಕು ಸರ್ವೇಯರ್ ರವರಿಗೆ ಸಭೆಯು ಯಾವ ಕಡೆ ಅನಧಿಕೃತ ಬಡಾವಣೆ ಬರುತ್ತದೆ ಎಂಬುದನ್ನು ಗುರುತಿಸಿ, ಆ ಬಡಾವಣೆಗಳನ್ನು ಪಟ್ಟಿ ಮಾಡಿ ಪ್ರಾಧಿಕಾರಕ್ಕೆ ವರದಿ ಮಾಡಲು ಹಾಗೂ ಉಪನೊಂದಣಿ ಕಚೆÉೀರಿಗೆ ಅನಧಿಕೃತ ಬಡಾವಣೆಯಲ್ಲಿನ ನಿವೇಶನಗಳನ್ನು ನೋಂದಣಿ ಮಾಡದಂತೆ ಕ್ರಮ ವಹಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ್‍ರವರು, ಹರಿಹರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ರಾಮಪ್ಪನವರು, ಸದಸ್ಯರುಗಳಾದ ದೇವಿರಮ್ಮ ಆರ್.ಎಲ್. ನಾಗರಾಜ ಎಂ. ರೋಖಡೆ, ಸೌಭಾಗ್ಯಮ್ಮ, ಡಿ.ವಿ.ಜಯರುದ್ರಪ್ಪ, ಆಯುಕ್ತರಾದ ಬಿ.ಟಿ.ಕುಮಾರಸ್ವಾಮಿ ಇವರು, ಹಾಗೂ ಪದನಿಮಿತ್ತ ಅಧಿಕಾರಿ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});