ದಾವಣಗೆರೆ: ನಗರದ ರಿಂಗ್ ರಸ್ತೆಯ ಸಮೀಪದ ಎಸ್ ಪಿಎಸ್ ನಗರದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದವರ ಮೇಲೆ ಪೋಲೀಸರು ದಾಳಿ ಮಾಡಿದ್ದು, ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಎಸ್ ಜೆಎಂ ನಗರ ನಿವಾಸಿ ಹೈದರ್ ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ದಾಳಿ ವೇಳೆ 3,460 ರೂಪಾಯಿ ನಗದು ಹಾಗೂ ಒಸಿ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.