ಹೊನ್ನಾಳಿ: ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಜೀ, ಅಂಬೇಡ್ಕರ್ , ಗೋಮಾತೆ ಶಾಪಗಳು ಕಾಡುತ್ತಿವೆ. ಈ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾ ಹೋರಾಟದ ನಂತರ ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಕಾಂಗ್ರೆಸ್ ಪಕ್ಷ ಆ ಕೆಲಸ ಮಾಡಲಿಲ್ಲ, ಅವರು ಹೇಳಿದಂತೆ ರಾಮರಾಜ್ಯ ಕೂಡ ಮಾಡಲಿಲ್ಲ. ಅದು ಗಾಂಧೀಜಿಶಾಪಕ್ಕೆ ಗುರಿಯಾಗಿದೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಎರಡು ಚುನಾವಣೆಗಳಲ್ಲಿ ಸೋಲಿಸಿತು.ಅಂಬೇಡ್ಕರ್ ಶಾಪ ಎದುರಿಸುತ್ತಿದೆ.
ಇನ್ನೂ ಮೂರನೆಯದಾಗಿ ಕಾಂಗ್ರೆಸ್ ಆರಂಭದಲ್ಲಿ ಆಕಳು-ಕರುವನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡಿತ್ತು. ಗೋಮಾತೆ ಹೆಸರಲ್ಲಿ ಅಧಿಕಾರಕ್ಕೆ ಬಂದು, ನಂತರ ಗೋಮಾತೆಯನ್ನೇ ಮರೆಯಿತು. ಈ ರೀತಿಯಾಗಿ ಗೋವು, ಗಾಂಧೀಜಿ, ಅಂಬೇಡ್ಕರ್ ಶಾಪ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.