Connect with us

Dvgsuddi Kannada | online news portal | Kannada news online

ದಾವಣಗೆರೆ: ಎಬಿವಿಪಿಯಿಂದ ಕೊರೊನಾ ಲಸಿಕೆ ಜಾಗೃತಿ  

ಪ್ರಮುಖ ಸುದ್ದಿ

ದಾವಣಗೆರೆ: ಎಬಿವಿಪಿಯಿಂದ ಕೊರೊನಾ ಲಸಿಕೆ ಜಾಗೃತಿ  

ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ವಿವಿಧ ಭಾಗದಲ್ಲಿ  ಭಾರತವೇ ಅಭಿವೃದ್ಧಿಪಡಿಸಿರುವ ಕೊರೊನಾ ಕೋವಿಶೀಲ್ಡ್  ಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ದೇಶದಾದ್ಯಂತ  ಇಂದು ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು,  ದಾವಣಗೆರೆಯಲ್ಲಿಯೂ ಕೂಡ 7 ಕಡೆ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಎಬಿವಿಪಿ ನಗರದ  ವಿವಿಧ ಕಾಲೇಜ್, ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ಜಾಗೃತಿ ಮೂಡಿಸಲಾಯಿತು.

ನಗರದ ವಿವಿಧ ಭಾಗದಲ್ಲಿ  #ITrustMyVaccine, #TrustYourVaccine ಎಂಬ ಪೋಸ್ಟರ್ ಬಿಡುಗಡೆ ಮಾಡಿ ಜನರಲ್ಲಿ‌ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಲಾಯಿತು.ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಎಬಿವಿಪಿ ಅಧ್ಯಕ್ಷ ಪವನ್ ರೇವಣಕರ್, ರಾಜ್ಯ ಕಾರ್ಯಕಾರಿ ಸದಸ್ಯ ಶರತ್ , ನಗರ ಕಾರ್ಯದರ್ಶಿ ಭಾರ್ಗವ , ಹಾಸ್ಟೆಲ್ ಪ್ರಮುಖ ರವಿ, ನಗರ ವಿದ್ಯಾರ್ಥಿನಿ ಪ್ರಮುಖ್ ಮಾನಸ, ಲಕ್ಷ್ಮಿ ,ಹೋರಾಟ ಪ್ರಮುಖ ವಿಜಯ, ಜಿಲ್ಲಾ ಮಾಧ್ಯಮ ಪ್ರಮುಖ್ ಆಕಾಶ್ ಇಟಗಿ ಹಾಗೂ ನಗರ ಕಾರ್ಯಕರ್ತರು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});