ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ , ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮಂತ್ರಾಲಯದ 2020- 21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಉಚಿತ ಹೈನುಗಾರಿಕೆ ಕೌಶಲ್ಯಾಭಿವೃದ್ಧಿ (Dairy Farmer/ Entrepreneur) ತರಬೇತಿಯನ್ನು ದಿನಾಂಕ ಏ. 05 ರಿಂದ 26 ದಿನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಗೆ ಆಸಕ್ತ ರೈತರು ಹಾಗೂ ಗ್ರಾಮೀಣ ಯುವಕ/ಯುವತಿಯರು ಒಟ್ಟು 25 ಜನರುಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತರು ಕನಿಷ್ಠ 5 ನೇ ತರಗತಿ ಪಾಸಾಗಿರಬೇಕು. ವಯೋಮಿತಿ 18-40 ವರ್ಷ ಸೂಕ್ತವಾಗಿರುತ್ತದೆ. ಆಸಕ್ತರು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯ ಜತೆಗೆ ಮರುಪಾವತಿಸಲಾಗುವ ಮುಂಗಡ ಹಣ ರೂ. 500 ಗಳನ್ನು ನೀಡಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮಾ. 31 ರೊಳಗೆ ಸಲ್ಲಿಸಬಹುದಾಗಿದೆ.
ಮೊದಲು ನೋಂದಾಯಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು. ತರಬೇತಿಯ ಸಮಯದಲ್ಲಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅಲ್ಲದೆ, ತರಬೇತಿ ಪ್ರಮಾಣ ಪತ್ರವನ್ನೂ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ. ಜಿ.ಕೆ. ಜಯದೇವಪ್ಪ, ವಿಷಯ ತಜ್ಞರು (ಪಶು ವಿಜ್ಞಾನ), ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರನ್ನು ಸಂಪರ್ಕಿಸಬೇಕಾಗಿ ವಿನಂತಿ. 9591426179, 944986876 ಸಂಪರ್ಕಿಸಿ.