ಬೆಂಗಳೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಸರ್ಕಾರ ಪಂಚಾಯತ್ ರಾಜ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯ್ತಿ ನೌಕರರ ಸಂಘಟನೆಗಳು ವೇತನ ಸಕಾಲದಲ್ಲಿ ಸಿಗದಿದ್ದರಿಂದ ಪದೇ ಪದೆ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದ್ದು, 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಗ್ರಾಪಂ ಸಿಬ್ಬಂದಿಗೆ ವೇತನ ಲಭ್ಯವಾಗುವಂತೆ ಕ್ರಮ ವಹಿಸುವುದು. ಗ್ರಾಮ ಪಂಚಾಯಿತಿಗಳು ವಸೂಲು ಮಾಡುವ ತೆರಿಗೆಯಲ್ಲಿ ಶೇ.40 ಹಣವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡುವುದು.15ನೇ ಹಣಕಾಸು ಯೋಜನೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯ ಸೇವೆ ನೀಡುವವರಿಗೆ ಪಾವತಿಸಲು ಅನುದಾನ ಮೀಸಲಿಡಲಾಗಿದೆಯೇ ಎಂದು ಪರಿಶೀಲಿಸುವುದು.ಬಾಕಿ ಉಳಿದಿರುವ ವೇತನವನ್ನು ಕಡ್ಡಾಯವಾಗಿ ಸ್ವಂತ ಸಂಪನ್ಮೂಲದಿಂದ ಪಾವತಿಸಲು ಸಿಇಒಗಳಿಗೆ ಸೂಚಿಸುವುದು.ಎನ್ಆರ್ಇಜಿ ಡೇಟಾ ಎಂಟ್ರಿ ಅಪರೇಟರ್ಸ್ ಸೇವೆಯನ್ನು 2006-07 ಸಾಲಿನಿಂದ ಪರಿಗಣಿಸುವ ಕುರಿತು ಪರಿಶೀಲಿಸಿ ವರದಿ ನೀಡುವುದು.ಗ್ರಾಪಂ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕಾಗಿ ಸಹಾಯಧನ ನಿಗದಿಪಡಿಸುವ ಬಗ್ಗೆ ಸಮಿತಿ ಪರಿಶೀಲಿಸಲಿದೆ.