ಬೆಳಗಾವಿ: ಕೆಲಸದ ಸಮಯದಲ್ಲಿಯೇ ಕಂಠಪೂರ್ತಿ ಕುಡಿದು ತಾಲೂಕು ತಹಶೀಲ್ದಾರ ಕಚೇರಿ ಮುಂದೆಯೇ ಗ್ರಾಮಲೆಕ್ಕಾಧಿಕಾರಿ ಮಲಗಿದ ಘಟನೆ ನಡೆದಿದೆ.
ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ಈ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದು ಮಲಗಿದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಸಂಜು ಬೆಣ್ಣಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿಯಾಗಿದ್ದಾರೆ. ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಆಗಿದ್ದ ಸಂಜು ಬೆಣ್ಣಿ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದರು.
ಈ ಹಿನ್ನೆಲೆಯಲ್ಲಿ ಅವರನ್ನು ಸವದತ್ತಿ ತಹಶಿಲ್ದಾರ್ ಕಚೇರಿಯಲ್ಲಿ ನಿಯೋಜಿಸಲಾಗಿತ್ತು. ಇದೀಗ ತಹಶಿಲ್ದಾರ್ ಕಚೇರಿಯಲ್ಲಿಯೂ ಕಂಠ ಪೂರ್ತಿ ಕುಡಿದು ಮಲಗಿದ್ದಾನೆ. ಇಂತಹ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.