Connect with us

Dvgsuddi Kannada | online news portal | Kannada news online

ಇನ್ಮುಂದೆ ವಿವಾಹ ನೋಂದಣಿ ಅಧಿಕಾರ ಗ್ರಾಮ ಪಂಚಾಯತಿ ಪಿಡಿಒಗೆ: ಸರ್ಕಾರ ಆದೇಶ

ಪ್ರಮುಖ ಸುದ್ದಿ

ಇನ್ಮುಂದೆ ವಿವಾಹ ನೋಂದಣಿ ಅಧಿಕಾರ ಗ್ರಾಮ ಪಂಚಾಯತಿ ಪಿಡಿಒಗೆ: ಸರ್ಕಾರ ಆದೇಶ

ಬೆಂಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಿವಾಹ ನೋಂದಣಿ ಮಾಡಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದಿಂದ ನೋಂದಣಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಲಿದೆ.  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ  ವವಾಹ ನೋಂದಣಿ ಅಧಿಕಾರ ವಹಿಸಲಾಗಿದೆ ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಕುರಿತ ಆದೇಶ  ಹೊರಡಿಸಿದೆ.

ಇನ್ಮುಂದೆ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೇ ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕೂ ಮುನ್ನ ತಾಲ್ಲೂಕ್ ಮತ್ತು ಜಿಲ್ಲಾ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟರ್) ಕಚೇರಿಯಲ್ಲಿ ಮಾತ್ರ ವ ನೋಂದಣಿ ಅವಕಾಶವಿತ್ತು.  ನೂತನ ಆದೇಶದಿಂದ ಅನವಶ್ಯಕ ಅಲೆದಾಟ ತಪ್ಪಿದಂತಾಗುತ್ತದೆ. ಕೆಲವು ದಿನಗಳ ಹಿಂದೆ ಸರ್ಕಾರ ಜನನ-ಮರಣ ನೋಂದಣಿ ಮಾಡುವ ಅಧಿಕಾರವನ್ನು ಪಿಡಿಒಗಳಿಗೆ ನೀಡಿತ್ತು. ಈಗ ವಿವಾಹ ನೋಂದಣಿ ಅಧಿಕಾರವನ್ನು ಅವರಿಗೆ ನೀಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top