Connect with us

Dvgsuddi Kannada | online news portal | Kannada news online

ಹಾವೇರಿ: ದಾಖಲೆ ಇಲ್ಲದ 58 ಲಕ್ಷ ಹಣ ಪತ್ತೆ; ಹಣ ವಶಕ್ಕೆ ಪಡೆದ ಪೊಲೀಸರು

ಪ್ರಮುಖ ಸುದ್ದಿ

ಹಾವೇರಿ: ದಾಖಲೆ ಇಲ್ಲದ 58 ಲಕ್ಷ ಹಣ ಪತ್ತೆ; ಹಣ ವಶಕ್ಕೆ ಪಡೆದ ಪೊಲೀಸರು

ಹಾವೇರಿನಗರದ ಶಿವಶಕ್ತಿ ಪ್ಯಾಲೆಸ್ ಲಾಡ್ಜ್ ‌ ನಲ್ಲಿ ದಾಖಲೆ ಇಲ್ಲದ 58 ಲಕ್ಷ ರೂ ಹಣ ಪತ್ತೆಯಾಗಿದೆ . ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಪೊಲೀಸರು ದಾಖಲೆ ಇಲ್ಲದ ಹಣ ಇಟ್ಟುಕೊಂಡಿದ್ದ ನಾಲ್ವರನ್ನು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ.

ಅಕ್ರಮ ಎಸಗುವ ಉದ್ದೇಶದಿಂದ ಆರೋಪಿಗಳು  ದಾಖಲೆಗಳಿಲ್ಲದ ಹಣ ಇಟ್ಟುಕೊಂಡು ಬಂದಿದ್ದರು  ಎಂಬ ಮಾಹಿತಿಯನ್ನು  ಪೊಲೀಸರು ನೀಡಿದ್ದಾರೆ.  ರವಿ , ಗಣಪತಿ , ಅನಿಲ್ , ಚನ್ನಪ್ಪ ಬಂಧಿತ ಆರೋಪಿಗಳಾಗಿದ್ದಾರೆ.  ಮೂವರು ಆರೋಪಿಗಳು ಬೆಳಗಾವಿ ಮೂಲದವರು , ಒಬ್ಬ ಬೆಂಗಳೂರಿನ ಕೆಂಗೇರಿ ಮೂಲದವರು ಎಂದು ಗುರುತಿಸಲಾಗಿದೆ.

58 ಲಕ್ಷ ರೂ . ಹಣ , ಹಣ ಎಣಿಸುವ ಎಲೆಕ್ಟ್ರಾನಿಕ್ ಯಂತ್ರ ವಶಕ್ಕೆ ಪಡೆದು  ವಿಚಾರಣೆ ನಡೆಸಿದ್ದಾರೆ . ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರೋ ಪೊಲೀಸರು ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top