ಬಳ್ಳಾರಿ: ಮಲಗಿದ್ದ ಕುರಿಗಾಯಿಗಳ ಮೇಲೆ ಲಾರಿ ಹರಿದು ಇಬ್ಬರು ಮೃತಪಟ್ಟ ಘಟನೆ ಬಳ್ಳಾರಿ ಸಮೀಪದ ಬೆಂಚಿಕೊಟ್ಟಲ ಗ್ರಾಮದ ಬಳಿ ಜರುಗಿದೆ. ಕಬ್ಬಿನ ಗದ್ದೆಲ್ಲಿ ಲಾರಿ ಲೋಡ್ ಮಾಡುವಾಗ ಈಘಟನೆ ಸಂಭವಿಸಿದೆ.
ಕಬ್ಬುನ್ನು ಸಾಗಾಟ ಮಾಡುವ ಲಾರಿ ಲೋಡ್ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕುರಿಗಾಯಿಗಳು ಮಲಗಿದ್ದನ್ನು ಗಮನಿಸಿದ ಲಾರಿ ಚಾಲಕ ರಿವರ್ಸ್ ಬರುವಾಗ ಈ ಘಟನೆ ನಡೆದಿದೆ. ಚಿತ್ರದುರ್ಗದ ಮೊಳಕಾಲ್ಮುರು ತಾಲ್ಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51) ಎರಿಸ್ವಾಮಿ (20) ಮೃತ ದುರ್ದೈವಿಗಳಾಗಿದ್ದು, ಕಬ್ಬಿನ ಹೊಲದಲ್ಲಿ ಕುರಿಗಳನ್ನು ನಿಲ್ಲಿಸಿಕೊಂಡು ಮಲಗಿದ್ದರು. ಕಬ್ಬು ಲೋಡ್ ಮಾಡಿಕೊಳ್ಳತ್ತಾ ರಿವರ್ಸ್ ಬಂದ ಸಮಯದಲ್ಲಿ ಇವರ ಮೇಲೆ ಲಾರಿ ಹರಿದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.



