ಚಿಕ್ಕಮಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ಸಹೋದರಿ ವಾತ್ಸಲ್ಯ ಕೃಷ್ಣಮೂರ್ತಿ ಕೊರೋನದಿಂದ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.
ಇದಕ್ಕೂ ಮೊದಲು ವೇದ ಕೃಷ್ಣಮೂರ್ತಿಯವರ ತಾಯಿ ಭಾನುವಾರ ಸೋಂಕಿನಿಂದ ಮೃತಪಟ್ಟಿದ್ದರು. ವೇದ ಅವರು ಒಂದು ವಾರದ ಅಂತರದಲ್ಲಿ ತಾಯಿ-ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಮೃತ ಸಹೋದರಿಯನ್ನು ಇಂದು ಕಡೂರಿನ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ ಎಂದು ತಿಳಿದುಬಂದಿದೆ.
ವೇದ ಕೃಷ್ಣಮೂರ್ತಿ ಭಾರತೀಯ ಕ್ರಿಕೆಟ್ ನಲ್ಲಿ ತನ್ನ ಸ್ಟೋಟಕ ಬ್ಯಾಟಿಂಗ್ ಮೂಲಕ ಗುರುತಿಸಿಕೊಂಡಿದ್ದರು. ಇದಲ್ಲದೇ ರಾಜ್ಯ ಆರೋಗ್ಯಯ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿಯಲ್ಲಿಯೂ ಪಾಲ್ಗೊಂಡಿದ್ದರು. ಇದಲ್ಲದೆ ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ.



