ಬೆಂಗಳೂರು: ರಾಜ್ಯದಲ್ಲಿ ಹೇರಿಸುವ ಕೊರೊನಾ ಕಪ್ರ್ಯೂ ವಿಫಲವಾಗಿದ್ದು, ಸಂಪೂರ್ಣ ಲಾಕ್‍ಡೌನ್ ಜಾರಿ ಬಗ್ಗೆ ಸರ್ಕಾರ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಫ್ಯೂನಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. ಪೂರ್ಣ ಲಾಕ್‍ಡೌನ್ ಮಾಡಬೇಕಾಗಿ ಅವಶ್ಯಕತೆ ಇದೆ. ಮೇ.12ರಂದು ಕರ್ಫ್ಯೂ ಅವಧಿ ಮುಗಿಯಲಿದೆ. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದಲ್ಲಿ ಬಧವಾರ ವರೆಗೆ ಒಂದು ಕೋಟಿ ಲಸಿಕೆ ಹಾಕಿದ್ದೇವೆ. 18 ರಿಂದ 45 ವರ್ಷದವರಿಗೆ ಮೇ.15ರಿಂದ ಲಸಿಕೆ ಹಾಕಲು ಕ್ರಮಕೈಗೊಳ್ಳುತ್ತೇವೆ. ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ನ ಎಲ್ಲರಿಗೂ ಲಸಿಕೆ ಹಾಕಲು ಆಧ್ಯತೆ ನೀಡುತ್ತೇವೆ. ಆಕ್ಸಿಜನ್ ಅಭಾವದಿಂದ ಪಾರಾಗಲು ನಾವು ಹವಾಮಾನದಿಂದ ಅಮ್ಲಜನಕ ಉತ್ಪಾದನೆ ಮಾಡಲು ಮುಂದಾಗಿದ್ದೇವೆ ಎಂದರು
ನಾನು ರಾಜೀನಾಮೆ ನೀಡಿದ ನಂತರವೇ ಸಚಿವರಾಗಿರುವುದು. ಈ ಸಮಯದಲ್ಲಿ ನಾನು ರಾಜಕೀಯ ಮಾತನಾಡಲ್ಲ. ಕೊರೊನಾ ಯೋಧನ ರೀತಿ ಕರ್ತವ್ಯ ನಿರ್ವಹಿಸುತ್ತೇನೆ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತನಾಡಲ್ಲ ಎಂದು ರಾಜೀನಾಮೆ ಆಗ್ರಹಿಸಿದ ಶಾಸಕ ರೇಣುಕಾಚಾರ್ಯ ಗೆ ತಿರುಗೇಟು ನೀಡಿದರು.