ಬೆಂಗಳೂರು: ಸಿಡಿ ಪ್ರಕರಣದ ಯುವತಿ ಪರವಾಗಿ ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ವಿರುದ್ಧ ಇಂದು ಪೊಲೀಸ್ ಕಮಿಷನರ್ ಗೆ ದೂರು ದಾಖಲಾಗಲಿದೆ. ಮಧ್ಯಾಹ್ನ 2.30ಕ್ಕೆ ಯುವತಿ ಪರವಾಗಿ ವಕೀಲ ಜಗದೀಶ್ ದೂರು ನೀಡಲಿದ್ದಾರೆ.
ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ ಯುವತಿ, ನಾನು ಇಷ್ಟು ದಿನ ಭಯದಲ್ಲಿದ್ದೆ, ಈಗ ನನಗೆ ಧೈರ್ಯ ಬಂದಿದೆ. ಹೀಗಾಗಿ ನಮ್ಮ ವಕೀಲರಾದ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ಧೇನೆ ಎಂದು ಹೇಳಿಕೊಂಡಿದ್ದಾಳೆ.ನಮ್ಮ ತಂದೆ-ತಾಯಿ ಆರ್ಶೀವಾದ, ರಾಜ್ಯ ಎಲ್ಲ ಪಕ್ಷ ಮತ್ತು ಸಂಘಟನೆಗಳ ಬೆಂಬಲದಿಂದ ದೂರು ನೀಡಲು ಮುಂದೆ ಬಂದಿದ್ದೇನೆ. ವಕೀಲ ಜಗದೀಶ್ ಅವರು ದೂರು ನೀಡುತ್ತಾರೆ ಎಂದು ಹೇಳಿದ್ಧಾರೆ.
ಈ ಪ್ರಕಣರದಲ್ಲಿ ನಾನು ಸ್ವತಃ ದೂರು ನೀಡುತ್ತಿಲ್ಲ. ಯುವತಿ ರಕ್ಷಣೆಗಾಗಿ ಕೇಳಿಕೊಂಡಿದ್ದರು. ನಾವು ಕೂಡ ರಕ್ಷಣೆ ಕೊಡುವುದಾಗಿ ಹೇಳಿದ್ದೇವು. ಹೀಗಾಗಿ ನನ್ನ ಮೂಲಕ ಯುವತಿ ದೂರು ನೀಡುತ್ತಿದ್ದಾಳೆ. ಈ ಪ್ರಕಣದಲ್ಲಿ ನಾನು ದೂರು ನೀಡುತ್ತಿಲ್ಲ. ಯುವತಿ ದೂರನ್ನು ಪೊಲೀಸರಿಗೆ ನೀಡುತ್ತಿದ್ದೇನೆ ಅಷ್ಟೇ ಎಂದು ವಕೀಲ ಜಗದೀಶ್ ಹೇಳಿದ್ದಾರೆ.



