ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಿ ಆರ್ ಪಿಸಿ 164 ನಿಯಮ ಅಡಿ ನ್ಯಾಯಾಲಯ ಅನುಮತಿ ನೀಡಿದೆ.
ಜೀವ ಭಯವಿರುವ ಕಾರಣ ಮತ್ತು ಎಸ್‌ಐಟಿ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ನ್ಯಾಯಾಧೀಶರ ಮುಂದೆಯೇ ಯುವತಿ ಹೇಳಿಕೆ ನೀಡಲು ಅನುಮತಿ ಕೋರಿ, ಯುವತಿ ಪರ ವಕೀಲ ಜಗದೀಶ್ ಮನವಿ ಸಲ್ಲಿಸಿದ್ದರು. ಇದಕ್ಕೆ ಪೊಲೀಸರು ಯಾವುದೇ ಅಕ್ಷೇಪಣೆ ಸಲ್ಲಿಸಿಲ್ಲ. ಕೆಲ ಹೊತ್ತಿನಲ್ಲಿ ಯುವತಿ ನ್ಯಾಯಾಧೀಶರ ಮುಂದೆ ದಾಖಲಿಸಲಿದ್ದಾರೆ.



