ಬೆಂಗಳೂರು: ನನ್ನ ಬಳಿ ಇನ್ನೂ ಮೂವರ ಪ್ರಭಾವಿಗಳ ಸಿಡಿ ಇವೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ಈ ಮಾಹಿತಿಯನ್ನು ತಿಳಿಸಿದ್ದು, ನನ್ನ ಬಳಿ ಇರುವ ವಿಡಿಯೋಗಳನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಪಟ್ಟಂತೆ ನಾನು ಕಾನೂನೂ ತಜ್ಞರ ಸಲಹೆಯನ್ನು ಪಡೆದುಕೊಂಡು ಮುಂದುವರೆಯುವುದಾಗಿ ಹೇಳಿದ್ದಾರೆ. ಇನ್ನೂ ತಮ್ಮ ಬಳಿ ಇರುವ ಮೂವರ ವಿಡಿಯೋಕ್ಕೆ ನಾನು ಈ ಬಗ್ಗೆ ಶೀಘ್ರದಲ್ಲೇ ಮಾಹಿತಿಯನ್ನು ನೀಡುತ್ತೇನೆ.
ನಾನು ವಿಡಿಯೋ ಬಿಡುಗಡೆ ಮಾಡಿದ ಬಳಿಕ ನನ್ನ ಜೀವಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಈ ಬಗ್ಗೆ ಭದ್ರತೆ ಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಳ್ಳಲಿದ್ದೇನೆ. ಇನ್ನೂ ರಮೇಶ್ ಜಾರಕಿಹೊಳಿಯವರ ರಾಜೀನಾಮೆಯನ್ನು ಪಡೆದುಕೊಂಡಿದ್ದಕ್ಕೆ ಸಿಎಂಗೆ ಧನ್ಯವಾದ ಎಂದಿದ್ದಾರೆ.



