ಬೆಂಗಳೂರು: ಕುರಿ, ಮೇಕೆ ಸಾಕಾಣಿಕೆದಾರರು, ವಲಸೆ ಕುರಿಗಾರರಿಗೆ ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2500 ರಿಂದ 3500ಕ್ಕೆ ಹೆಚ್ಚಿಸಲಾಗಿದೆ. ಇನ್ನು ಕುರಿಗಾರರು ಆಕಸ್ಮಿಕ ಮರಣ ಹೊಂದಿದಲ್ಲಿ 5 ಲಕ್ಷ ವಿಮಾ ಸೌಲಭ್ಯ ಇರಲಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ.
3-6 ತಿಂಗಳ ವಯಸ್ಸಿನ ಕುರಿ, ಮೇಕೆಗಳಿಗೆ ನೀಡುವ ಪರಿಹಾರ ಧನವನ್ನು 2,500 ರೂಗಳಿಂದ 3,500 ರೂ ಗಳಿಗೆ ಹೆಚ್ಚಿಸಲಾಗುವುದು. ಕುರಿ, ಮೇಕೆ ಸಾಕಾಣಿಕೆದಾರರು, ವಲಸೆಗಾರರು, ಆಕಸ್ಮಿಕ ಮರಣ ಹೊಂದಿದಲ್ಲಿ, ಅವಲಂಬಿತ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು, ಕುರಿಗಾಯಿಗಳಿಗೆ ಐದು ಲಕ್ಷ ರೂ ವಿಮಾ ಸೌಲಭ್ಯ ನೀಡಲಾಗುವುದು.ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯದ ಜೊತೆಗೆ, ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ಸಹಾಯ ಧನ ಸಹಾಯ ನೀಡಲಾಗುವುದು.