ಭದ್ರಾವತಿ: ಸರ್ಕಾರದ 5 ಗ್ಯಾರಂಟಿಗಳಿಗಿಂತ ಜನರಿಗೆ ದುಡಿಯುವ ಗ್ಯಾರಂಟಿ ನೀಡಬೇಕಿದೆ ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ದಾವಣಗೆರೆ: ಮನೆ ಮುಂದೆ ಟ್ರ್ಯಾಕ್ಟರ್ ನಿಲ್ಲಿಸುವ ವಿಚಾರಕ್ಕೆ ಎರಡು ಕುಟುಂಬ ನಡುವೆ ಜಗಳ ; ಪ್ರಕರಣ ದಾಖಲು
ತರಳಬಾಳು ಹುಣ್ಣಿಮೆ ಮಹೋತ್ಸವ – 2026ರ ಮೊದಲ ದಿನದ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನರಿಗೆ ದುಡಿಯುವ ಕೆಲಸದ ಗ್ಯಾರಂಟಿ ಬೇಕು. ದುಡಿಮೆ ಗ್ಯಾರಂಟಿ ಕೊಟ್ಟರೆ, ಅದಕ್ಕಿಂತ ಬೇರೆ ಯಾವುದು ಬೇಡ ಎಂದರು.
1923ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಇಲ್ಲಿನ ವಿ.ಎಸ್.ಎನ್.ಎಲ್. ಕಾರ್ಖಾನೆ ಆರಂಭಿ ಸಲಾಗಿತ್ತು. ರಾಜಪ್ರಭುತ್ವದಲ್ಲಿ ಸ್ಥಾಪನೆಯಾದ ಇಲ್ಲಿನ ಕಾರ್ಖಾನೆ, ಈಗ ಪ್ರಜಾಪ್ರಭುತ್ವದಲ್ಲಿ ಹಾಳು ಹಂಪೆಯಾಗಿರುವುದು ಶೋಚನೀಯ.ಕೇಂದ್ರ ಸರ್ಕಾರದ ಈ ಜಾಗದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿದೆ. ಈ ಹಿಂದೆ ಇಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಕಸದ ರಾಶಿ ಇತ್ತು. ಈಗ ಕಸ ತೆರವುಗೊಳಿಸ ಲಾಗಿದೆ. ಮತ್ತೆ ಇಲ್ಲಿ ಕಸ ಬೀಳದಂತೆ ಇಲ್ಲಿನ 100 – 150 ಎಕರೆ ಪ್ರದೇಶಕ್ಕೆ ಬೇಲಿ ಅಳವಡಿಸಬೇಕು ಎಂದು ಶ್ರೀಗಳು ವೇದಿಕೆಯ ಮೇಲಿದ್ದ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೂಚಿಸಿದರು.
ಇಂದಿನ ತರಳಬಾಳು ಹುಣ್ಣಿಮೆಗೆ ಸಿರಿಗೆರೆಯಿಂದ ಇಲ್ಲಿಗೆ ಬರುವಾಗ ಯುವಕರು ಬೈಕ್‌ಗಳಲ್ಲಿ ಮೆರವಣಿಗೆ ಮೇಲೆ ಬಂದರು. ಆಗ ರಾಷ್ಟ್ರಕವಿ ಕುವೆಂಪು ಅವರ ಹಿಂದೆ ಒಬ್ಬ ಗುರು ಇದ್ದ, ಮುಂದೆ ಒಂದು ಗುರಿ ಇತ್ತು, ಸಾಗುತ್ತಿತ್ತು ರಣಧೀರರ ದಂಡುಎಂಬ ವಾಣಿ ನೆನಪಿಗೆ ಬಂದಿತು ಎಂದು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಹಾಗೂ ಸದಸ್ಯ ಗೋವಿಂದ ಕಾರಜೋಳ, ಶಾಸಕರಾದ ಬಿ.ಪಿ. ಹರೀಶ್, ಎಂ.ಚಂದ್ರಪ್ಪ, ಶಿವಗಂಗಾ ಬಸವರಾಜ್, ಬಿ.ಕೆ. ಸಂಗಮೇಶ್, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮಾಜಿ ಸಚಿವ ಸಾರಾ ಮಹೇಶ್, ಸಾದು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಮತ್ತಿತರರು ಉಪಸ್ಥಿತರಿದ್ದರು.



