ಬೆಂಗಳೂರು: ಪೊಲೀಸರು ಭರ್ಜರಿ ಕಾರ್ಯಾಚಾರಣೆ ನಡೆಸಿದ್ದು, ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ಕೆ.ಜಿ. 55 ಗ್ರಾಂ ಚಿನ್ನಾಭರಣವನ್ನು ಸಿಟಿ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ (ನ.20) ರಾತ್ರಿ ಇಬ್ಬರು ಆರೋಪಿಗಳು, ಕೋರಿಯರ್ ಬ್ಯಾಗ್‌ನಲ್ಲಿ ಚಿನ್ನಾಭರಣ ಇಟ್ಟುಕೊಂಡು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ, ದೊಡ್ಡಪೇಟೆ ವೃತ್ತದಲ್ಲಿ ಆರೋಪಿಗಳನ್ನು ತಡೆದು ವಿಚಾರಣೆ ನಡೆಸಿದಾಗ ಚಿನ್ನಾಭತಣ ಪತ್ತೆ ಆಗಿದೆ. ಚಿನ್ನಾಭರಣ ಸಾಗಿಸುತ್ತಿದ್ದ ಆರೋಪಿಗಳಾದ ಮುಂಬೈನ ದಲ್ವತ್‌ಸಿಂಗ್ (34) ಹಾಗೂ ರಾಜಸ್ಥಾನದ ವಿಕಾಸ್ (35) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು, ಚಿನ್ನಾಭರಣಕ್ಕೆ ಯಾವುದೇ ದಾಖಲೆ ನೀಡಿಲ್ಲ. ಇಷ್ಟೊಂದು ಚಿನ್ನಾಭರಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.