Connect with us

Dvgsuddi Kannada | online news portal | Kannada news online

ಬಾರ್ ಲೈಸೆನ್ಸ್ ಮಂಜೂರಾತಿಗೆ 15 ಲಕ್ಷ ಲಂಚಕ್ಕೆ ಬೇಡಿಕೆ‌‌‌; ಹಣ ಸ್ವೀಕರಿಸುವಾಗ ಅಬಕಾರಿ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ

ಪ್ರಮುಖ ಸುದ್ದಿ

ಬಾರ್ ಲೈಸೆನ್ಸ್ ಮಂಜೂರಾತಿಗೆ 15 ಲಕ್ಷ ಲಂಚಕ್ಕೆ ಬೇಡಿಕೆ‌‌‌; ಹಣ ಸ್ವೀಕರಿಸುವಾಗ ಅಬಕಾರಿ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ

ಬೆಂಗಳೂರು: ಬಾರ್ ಅಂಡ್ ರೆಸ್ಟೋರೆಂಟ್ ಲೈಸೆನ್ಸ್ ಮಂಜೂರು ಮಾಡಲು 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಬೇಡಿಕೆಯಿಟ್ಟಿದ್ದ ಅಬಕಾರಿ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

11 ಲಕ್ಷ ರೂ. ಹಣ ಮುಂಗಡವಾಗಿ ಪಡೆದು ಬಾಕಿ 4 ಲಕ್ಷಕ್ಕೆ ಇನ್ಸ್​ಪೆಕ್ಟರ್ ದುಂಬಾಲು ಬಿದ್ದಿದ್ದರು. ಗುರುವಾರ 4 ಲಕ್ಷ ರೂ. ಲಂಚ ಸ್ವೀಕರಿಸುವಾಗ 1,02,100 ರೂ. ಹೆಚ್ಚುವರಿ ಹಣದ ಸಮೇತ ಮಂಜುನಾಥ್​ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಕೆಂಗೇರಿ ವಲಯದ ಅಬಕಾರಿ ಇನ್ಸ್​ಪೆಕ್ಟರ್ ಮಂಜುನಾಥ್ ಬಂಧಿತ ಅಧಿಕಾರಿಯಾಗಿದ್ದಾರೆ. ಸಿ.ಎಲ್ 7 ಲೈಸೆನ್ಸ್​ಗೆ ಬಾರ್ ಮಾಲೀಕರೊಬ್ಬರು ಅರ್ಜಿ ಸಲ್ಲಿಸಿದ್ದರು. ಅಬಕಾರಿ ಆಯುಕ್ತರು ಪರಿಶೀಲಿಸಿ ಅಬಕಾರಿ ಇನ್ಸ್​ಪೆಕ್ಟರ್​ಗೆ ಅರ್ಜಿ ವರ್ಗಾಯಿಸಿದ್ದರು. ಇನ್ಸ್​ಪೆಕ್ಟರ್ ಮಂಜುನಾಥ್ ಅನುಮತಿ ನೀಡಲು 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಾರ್ ಮಾಲೀಕ ಅಪರಾಧ ಪತ್ತೆ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top