Connect with us

Dvgsuddi Kannada | online news portal | Kannada news online

ಕಾಂಗ್ರೆಸ್ ನಲ್ಲಿ ಗೆಲುವು ಸಾಧಿಸಿದ ಶಾಸಕರ ಪೈಕಿ ಯಾವ ಸಮುದಾಯದಿಂದ ಎಷ್ಟು ಮಂದಿ..?; ದೊಡ್ಡ ಪ್ರಮಾಣದಲ್ಲಿ ‘ಕೈ’ ಹಿಡಿದ ಲಿಂಗಾಯತ ಸಮಾಜ..!

ಪ್ರಮುಖ ಸುದ್ದಿ

ಕಾಂಗ್ರೆಸ್ ನಲ್ಲಿ ಗೆಲುವು ಸಾಧಿಸಿದ ಶಾಸಕರ ಪೈಕಿ ಯಾವ ಸಮುದಾಯದಿಂದ ಎಷ್ಟು ಮಂದಿ..?; ದೊಡ್ಡ ಪ್ರಮಾಣದಲ್ಲಿ ‘ಕೈ’ ಹಿಡಿದ ಲಿಂಗಾಯತ ಸಮಾಜ..!

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಕೇಂದ್ರ ಬಿಂದುವಾಗಿತ್ತು, ಸತತ ಸೋಲಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್​ ಬರೋಬ್ಬರಿ 136 ಸ್ಥಾನಗಳಲ್ಲಿ ಜಯ ಗಳಿಸಿದೆ.ಇದು 35 ವರ್ಷ ಬಳಿಕ ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನಗಳಾಗಿವೆ.

ಕಾಂಗ್ರೆಸ್ ಪಕ್ಷ ಸಹ ಜಾತಿ ಪ್ರಮುಖ ಮಾನದಂಡ ಇಟ್ಟುಕೊಂಡು ಟಿಕೆಟ್​ ಘೋಷಣೆ ಮಾಡಿತ್ತು. ಇದೀಗ ಆ ಪ್ಲಾನ್​ ವರ್ಕೌಟ್ ಆಗಿದೆ. ನಿರೀಕ್ಷೆಯಂತೆ ಬಹುತೇಕರು ಜಯ ಗಳಿಸಿದ್ದು, ಅದರಲ್ಲೂ ಲಿಂಗಾಯ ಸಮುದಾಯ ಬಹುದೊಡ್ಡ ಮಟ್ಟದಲ್ಲಿ ಕೈ ಹಿಡಿದಿದೆ.

ಕಾಂಗ್ರೆಸ್​ 51 ಲಿಂಗಾಯತರಿಗೆ, 45 ಒಕ್ಕಲಿಗ ಹಾಗೂ 15 ಮುಸ್ಲಿಮರಿಗೆ, 7 ಮಂದಿ ಬ್ರಾಹ್ಮಣ ಸಮುದಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಬಿಲ್ಲವ – ಈಡಿಗ ಸಮುದಾಯಕ್ಕೆ 7, ಬಂಟ ಸಮೂದಾಯಕ್ಕೆ 5, ಕ್ರೈಸ್ತ ಸಮುದಾಯಕ್ಕೆ 3, ಗೊಲ್ಲ ಸಮುದಾಯಕ್ಕೆ 2, ಮರಾಠರಿಗೆ 4, ರಜಪೂತರಿಗೆ 2, ರೆಡ್ಡಿಗಳಿಗೆ 3 ಟಿಕೆಟ್ ನೀಡಲಾಗಿತ್ತು. ಇದಲ್ಲದೆ ಕುರುಬ ಸಮುದಾಯದ 14 ಮಂದಿಗೆ, ವಾಲ್ಮೀಕಿ- 16, ಎಸ್‌ ಸಿ ಎಡ- 10, ಎಸ್ ಸಿ ಬಲ- 15, ಉಪ್ಪಾರ- 1, ವೈಶ್ಯ – 1, ಕೊಡವ -1 ಬೆಸ್ತ-ಕೋಲಿ- ಮೊಗವೀರ ಸಮುದಾಯದ 5 ಮಂದಿಗೆ ಟಿಕೆಟ್ ನೀಡಲಾಗಿತ್ತು.

ಫಲಿತಾಂಶದಲ್ಲಿ ಕಾಂಗ್ರೆಸ್ ನಿಂದ ರಾಜ್ಯದ ಪ್ರಬಲ ಜಾತಿಗಳಾದ ಲಿಂಗಾಯಿತ ಸಮೂದಾಯದಿಂದ 39 ಮಂದಿ ಜಯಸಾಲಿಯಾದರೆ, ಒಕ್ಕಲಿಗ ಸಮೂದಾಯದಿಂದ 21 ಮಂದಿ ಆರಿಸಿ ಬಂದಿದ್ದಾರೆ.ಕುರುಬ ಸಮೂದಾಯದ 8, ಎಸ್​ಟಿ 15, ಬ್ರಾಹ್ಮಣ ಸಮುದಾಯದಿಂದ 3, ರೆಡ್ಡಿ ಸಮೂದಾಯದ 3, ಎಸ್​ಸಿ ಎಡ 6, ಎಸ್​ಸಿ ಬಲ 11, ಎಸ್​ಸಿ ಬೋವಿ-3, ಎಸ್​ಸಿ ಲಮಾಣಿ 1, ಕೊರ್ಚ 1, ಬಿಲ್ಲವ 1, ಈಡಿಗ 3, ಮಾರಾಟ 2, ರಜಪೂತ್​1, ಉಪ್ಪಾರ 1, ಬೆಸ್ತ 1, ಬಂಟ, ಕೊಡವಾ, ಜೈನ್ ಸಮೂದಾಯದ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಅಭ್ಯರ್ಥಿಗಳಲ್ಲಿ 9 ಮಂದಿ ಜಯ ಸಾಧಿಸಿದ್ದಾರೆ. ಒಬ್ಬ ಕ್ರಿಸ್ಚಿಯನ್​ ಜಯ‌ ಗಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top