Connect with us

Dvgsuddi Kannada | online news portal | Kannada news online

ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ 5 ಕೆಜಿ‌ ಅಕ್ಕಿ ಹಣ ಜಮೆಯಾಗಿದೆಯೇ..? ಎಂದು ಚೆಕ್ ಮಾಡಲು ಈ ಕ್ರಮ ಅನುಸರಿಸಿ….!!

IMG 20231219 153015

ಪ್ರಮುಖ ಸುದ್ದಿ

ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ 5 ಕೆಜಿ‌ ಅಕ್ಕಿ ಹಣ ಜಮೆಯಾಗಿದೆಯೇ..? ಎಂದು ಚೆಕ್ ಮಾಡಲು ಈ ಕ್ರಮ ಅನುಸರಿಸಿ….!!

ದಾವಣಗೆರೆ: ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ನಗದು ಹಣ ಜಮೆಯಾಗಿದೆಯೇ.. ? ಎಂದು ಚೆಕ್ ಮಾಡಲು ಈ ಮುಂದಿನ ಕ್ರಮ ಅನುಸರಿಸಬೇಕಿದೆ. ಜುಲೈ 10, 2023 ರಿಂದ ಪ್ರಾರಂಭಿಸಲಾದ ಈ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಆದರೆ, ಅಕ್ಕಿ ಕೊರತೆಯಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕು ಹಣವನ್ನು ಪಡಿತರ ಗ್ರಾಹಕರ ಖಾತೆಗೆ ನೇರ ನಗದು ಮೂಲಕ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

ಅನ್ನ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸುತ್ತದೆ. ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ.

ಮಳೆ ಕೊರತೆ ಹಿನ್ನಲೆ ರಾಜ್ಯದಲ್ಲಿ ಅಕ್ಕಿ ಕೊರತೆ ಹೆಚ್ಚಳ ಅಧಿಕವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಭತ್ತ ಬೆಳೆಗೆ ನಿರ್ಧಾರ ಮಾಡಲಾಗುವ ಗುರಿಗಿಂತ ಶೇಕಡ 35 ರಷ್ಟು ಭತ್ತ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈ ನಡುವೆ ಸರ್ಕಾರದ ಅನ್ನ ಭಾಗ್ಯ ಯೋಜನೆ ಮೇಲೆಯೂ ಇದು ಹೊರೆಯಾಗುವ ನಿರೀಕ್ಷೆಯಿದೆ.

  • ಅನ್ನ ಭಾಗ್ಯ ಯೋಜನೆಯ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆಯಾಗಿದೆಯಾ ಎಂದು ಸ್ಟೇಟಸ್ ಪರಿಶೀಲಿಸಲು ಈ ಕ್ರಮ ಅನುಸರಿಸಿ…
  • ಮೊದಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ
  • ಹೋಮ್‌ಪೇಜ್‌ನಲ್ಲಿ ಇ-ಸೇವೆಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಿ
  • ಡಿಬಿಟಿ ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿ
  • ತಿಂಗಳು, ವರ್ಷವನ್ನು ಆಯ್ಕೆ ಮಾಡಿ. ನಿಮ್ಮ ಪಡಿತರ ಚೀಟಿ ಸಂಖ್ಯೆ (ಆರ್‌ಸಿ ಸಂಖ್ಯೆ) ನಮೂದಿಸಿ ಮತ್ತು continue ಕ್ಲಿಕ್ ಮಾಡಿ
  • ಆಗ ಡಿಬಿಟಿ ಸ್ಟೇಟಸ್ ಪರದೆಯ ಮೇಲೆ ಕಾಣಲಿದ್ದು, ನಿಮ್ಮ ಖಾತೆಯ ಸಂಪೂರ್ಣ ವಿವರ ಸಿಗಲಿದೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

  • rain22 rain22

    ಪ್ರಮುಖ ಸುದ್ದಿ

    ಮುಂದಿನ ತಿಂಗಳು ವಾಡಿಕೆಗಿಂತ ಅಧಿಕ ಮಳೆ ಮುನ್ಸೂಚನೆ

    By

    ಬೆಂಗಳೂರು: ಈ ಬಾರಿ ಮೇ, ಜೂನ್ ತಿಂಗಳಲ್ಲಿ ಮುಂಗಾರು ಮಳೆ (monsoon rain)  ನಿರೀಕ್ಷೆ ಮೀರಿ ಸುರಿದಿದೆ. ಇನ್ನೂ ಕೆಲ ಜಿಲ್ಲೆಯಲ್ಲಿ...

  • astrology today astrology today

    ಪ್ರಮುಖ ಸುದ್ದಿ

    ಶನಿವಾರದ ರಾಶಿ ಭವಿಷ್ಯ 28 ಜೂನ್ 2025

    By

    ಈ ರಾಶಿಯವರ ಉದ್ಯೋಗ ವ್ಯಾಪಾರ ವಹಿವಾಟಗಳಲ್ಲಿ ಭಾರಿ ನಷ್ಟ, ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ, ಶನಿವಾರದ ರಾಶಿ ಭವಿಷ್ಯ...

  • astrology today astrology today

    ಪ್ರಮುಖ ಸುದ್ದಿ

    ಗುರುವಾರದ ರಾಶಿ ಭವಿಷ್ಯ 26 ಜೂನ್ 2025

    By

    ಈ ರಾಶಿಯವರಿಗೆ ನಂಬಿದವರು ದೂರ ಆಗುತ್ತಾರೆ, ಈ ರಾಶಿಯವರ ಮದುವೆ ವಿಳಂಬ ಎಂಬ ಏಕೆ? ಗುರುವಾರದ ರಾಶಿ ಭವಿಷ್ಯ 26 ಜೂನ್...

  • images 11 images 11

    ಪ್ರಮುಖ ಸುದ್ದಿ

    ಗಜಕೇಸರಿ ಯೋಗ ಮಾಹಿತಿ

    By

    ಸೋಮಶೇಖರ್B.Sc ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು. Mob.93534 88403 ವ್ಯಕ್ತಿಯ ಜನ್ಮ ಕುಂಡಲಿಯನ್ನು ನೋಡಿ ಯೋಗಗಳನ್ನು ನೋಡಬಹುದು. ಅದರಲ್ಲಿ ಒಂದು...

  • astrology today astrology today

    ಪ್ರಮುಖ ಸುದ್ದಿ

    ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025

    By

    ಈ ರಾಶಿಯ ವಿಚ್ಛೇದನ ಪಡೆದ ಪತಿ ಪತ್ನಿ ಮತ್ತೆ ಸೇರೋ ಬಯಕೆ, ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು, ಮಂಗಳವಾರದ...

To Top